ನಿರ್ಭಯಾ ಹಂತಕರ ಗಲ್ಲಿಗೇರಿಸಲು ಸಕಲ ಸಿದ್ಧತೆಗಳು ನಡೆದಿವೆ: ತಿಹಾರ್ ಜೈಲಾಧಿಕಾರಿಗಳು

ಗಲ್ಲು ಶಿಕ್ಷೆಯನ್ನು ಮುಂದೂಡಲು ಸಾಧ್ಯವಿರುವ ಎಲ್ಲಾ ಕಾನೂನು ಅವಕಾಶಗಳನ್ನು ನಿರ್ಭಯಾ ಹಂತಕರು ಬಳಸಿಕೊಳ್ಳುತ್ತಿದ್ದು, ಈ ನಡುವಲ್ಲೇ ಹಂತಕರ ಗಲ್ಲಿಗೇರಿಸಲು ಎಲ್ಲಾ ರೀತಿಯ ಸಿದ್ಧತೆಗಳಾಗಿವೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಲ್ಲು ಶಿಕ್ಷೆಯನ್ನು ಮುಂದೂಡಲು ಸಾಧ್ಯವಿರುವ ಎಲ್ಲಾ ಕಾನೂನು ಅವಕಾಶಗಳನ್ನು ನಿರ್ಭಯಾ ಹಂತಕರು ಬಳಸಿಕೊಳ್ಳುತ್ತಿದ್ದು, ಈ ನಡುವಲ್ಲೇ ಹಂತಕರ ಗಲ್ಲಿಗೇರಿಸಲು ಎಲ್ಲಾ ರೀತಿಯ ಸಿದ್ಧತೆಗಳಾಗಿವೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. 

ಹಂತಕರ ಗಲ್ಲಿಗೇರಿಸಲು ಮಂಗಳವಾರ 6 ಗಂಟೆಗೆ ಸಮಯ ನಿಗದಿಯಾಗಿತ್ತು. ಇದರಂತೆ ನಾವು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕಕೊಂಡಿದ್ದೆವು. ಇದೀಗ ಮತ್ತೆ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೂ ಕಾಯುತ್ತಿದ್ದೇವೆಂದು ಜೈಲಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ದೆಹಲಿಯ ನಿರ್ಭಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರೂ ದೋಷಿಗಳು ಮರಣದಂಡನೆ ಜಾರಪಿ 3ನೇ ಬಾರಿ ಮುಂದಕ್ಕೆ ಹೋಗಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಡೆಯಬೇಕಿದ್ದ ಇವರ ಗಲ್ಲು ಶಿಕ್ಷೆ ಜಾರಿಯನ್ನು ಮುಂದಿನ ಆದೇಶದವರೆಗೂ ದೆಹಲಿ ನ್ಯಾಯಾಲಯ ಮುಂದೂಡಿದೆ. 

ಇಷ್ಟೆಲ್ಲಾ ವಿದ್ಯಾಮಾನಕ್ಕೆ ಕಾರಣವಾಗಿದ್ದು ದೋಷಿ ಪವನ್ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ. ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಕೋರಿ ಆತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸೋಮವಾರ ಬೆಳಿಗ್ಗೆ ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಗಲ್ಲಿಗೆ ತಡೆ ನೀಡಲೂ ನಿರಾಕರಿಸಿತು. ಇದರ ಬೆನ್ನಲ್ಲೇ ಆತ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ.

ಇದನ್ನು ಗಣನೆಗೆ ತೆಗೆದುಕೊಂಡ ದೆಹಲಿ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದ್ರ ರಾಣಾ, ದೋಷಿಯೊಬ್ಬನ ಕ್ಷಮಾದಾನ ಅರ್ಜಿ ಇತ್ಯರ್ಥ ಬಾಕಿ ಇರುವ ಕಾರಣ ಈ ಹಂತದಲ್ಲಿ ಗಲ್ಲು ಶಿಕ್ಷೆ ಜಾರಿ ಸಾಧ್ಯವಿಲ್ಲ. ಮುಂದಿನ ಆದೇಶದವರೆಗ ನೇಣು ಶಿಕ್ಷೆ ಜಾರಿ ಮುಂದೂಡಲಾಗಿದೆ. ದೋಷಿಯೊಬ್ಬನ ಮುಂದೆ ಇನ್ನೂ ಕಾನೂನು ಆಯ್ಕೆ ಇವೆ. ಹೀಗಿದ್ದಾಗ ಅವನ್ನು ಆತನಿಗೆ ನಿರಾಕರಿಸಿ ಆತ ಸೃಷ್ಟಿಕರ್ತನನ್ನು ತಲುಪುವಂತೆ ಮಾಡಲಾಗದು ಎಂದರು. 

ಇದಕ್ಕ ನಿರ್ಭಯಾ ತಾಯಿ ಆಶಾದೇಶವಿಯವರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದು ವ್ಯವಸ್ಥೆಯ ವೈಫಲ್ಯ. ತನ್ನದೇ ಆದೇಶ ಜಾರಿ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com