ಯೆಸ್ ಬ್ಯಾಂಕ್ ಬಿಕ್ಕಟ್ಟು: ಬಿಜೆಪಿ, ಕಾಂಗ್ರೆಸ್'ನಿಂದ ಕೆಸರೆರಚಾಟ ಶುರು

ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟವು ಮೋದಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡಿದ್ದು, ರಾಜಕೀಯ ಕೆಸರೆರಚಾಟ ಶುರುವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟವು ಮೋದಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡಿದ್ದು, ರಾಜಕೀಯ ಕೆಸರೆರಚಾಟ ಶುರುವಾಗಿದೆ. 

ನೋ ಯೆಸ್ ಬ್ಯಾಂಕ್. ಮೋದಿ ಹಾಗೂ ಅವರ ನೀತಿಗಳು ಭಾರತದ ಆರ್ಥಿಕತೆ ಹಾಳು ಮಾಡಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ರಾಹುಲ್ ಆವರ ಈ ಟ್ವೀಟ್'ಗೆ ತಿರುಗೇಟು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 20147ಕ್ಕೆ ಮುಂದೆ (ಯುಪಿಎ ಸರ್ಕಾರದ ಅವಧಿಯಲ್ಲಿ) ಯೆಸ್ ಬ್ಯಾಂಕ್ ನಿಂದ ವಸೂಲಾಗದ ಸಾಲ ನೀಡಲಾಗಿದೆ ಎಂದಿದ್ದಾರೆ. 

ಇದಕ್ಕೆ ಮಾಜಿ ವಿತ್ತ ಸಚಿವ ಚಿದಂಬರಂ ಅವರು ತಿರುಗೇಟು ನೀಡಿ, 2014ರಲ್ಲಿ ಯೆಸ್ ಬ್ಯಾಂಕ್ ನೀಡಿದ್ದ ಸಾಲ ರೂ.55,623 ಕೋಟಿ ಇತ್ತು. ಅದು 2019ರಲ್ಲಿ ರೂ.2,41,499 ಗೆ ಏರಿದೆ. ಅದು ಹೇಗೆ? ಪಿಎಂಸಿ ಬ್ಯಾಂಕ್ ಆಯು್ತು. ಈಗ ಯೆಸ್ ಬ್ಯಾಂಕ್. ಮುಂದಿನದು ಯಾವುದು? ಎಂದು ಪ್ರಶ್ನಿಸಿದ್ದಾರೆ. 

ಯೆಸ್ ಬ್ಯಾಂಕ್ ಬಿಕ್ಕಟ್ಟು ಏಕೆ? 
ಯೆಸ್ ಬ್ಯಾಂಕ್ ಸಾಲ ನೀಡಿದ ಅನಿಲ್ ಅಂಬಾನಿಯವರ ರಿಲಯನ್ಸ್, ಐಎಲ್ಎಫ್ಎಸ್, ಎಸ್ಸೆಲ್, ವರದರಾಜ ಸಿಮಂಟ್, ಮಂತ್ರಿ ಗ್ರೂಪ್ ಮೊದಲಾದವು ನಷ್ಟದಲ್ಲಿ ಸಿಲುಕಿದವು. ಇದರಿಂದ ಯೆಸ್ ಬ್ಯಾಂಕ್'ನ ವಸೂಲಾಗದ ಸಾಲದ ಮೊತ್ತ ಹೆಚ್ಚಿತ್ತು. 

ಬ್ಯಾಂಕ್ ನಷ್ಟದ ಪ್ರಮಾಣ ಹೆಚ್ಚಾಗಿ, 2018ರಲ್ಲಿ ರೂ.4000 ಇದ್ದ ಷೇರು ಮೌಲ್ಯ, ಈಗ ರೂ.16.60ಕ್ಕೆ ಇಳಿದಿದೆ. ಬ್ಯಾಂಕ್ ಆಡಳಿತ ಮಂಡಳಿಯಲ್ಲಿನ ತಿಕ್ಕಾಟ, ಹಿಂದಿನ ಬ್ಯಾಂಕ್ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯಿಂದ ಅಕ್ರಮ, ಬ್ಯಾಂಕ್ ವಹಿವಾಟು ಸರಿಯಿಲ್ಲ ಎಂಬ ವದಂತಿಗಳಿಂದ ಖಾತೆದಾರರು ಭಾರೀ ಹಣ ಹಿಂಪಡೆಯಲು ಆರಂಭಿಸಿದ್ದು ಕೂಡ ಬಿಕ್ಕಟ್ಟಿಗೆ ಕಾರಣ ಎದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com