ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದೆ: ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದ್ದು, ಅದನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆಂದು ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ. 
ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್
ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಮುಂಬೈ; ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದ್ದು, ಅದನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆಂದು ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯೆಸ್ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರದಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಈಗಾಗಲೇ ಸಿದ್ಧವಾಗಿದ್ದು, ಅದನ್ನು ಎಸ್'ಬಿಐ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ. 

ಕರಡು ಯೋಜನೆ ಪರಿಶೀಲನೆ ಬಳಿಕ ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆಗೆ ಸಿದ್ಧವಿರಲಿದೆ. ಯೆಸ್ ಬ್ಯಾಂಕ್ ಷೇರುದಾರರ ಹಿತ ಕಾಪಾಡಲು ಎಸ್'ಬಿಐ ಬದ್ಧವಾಗಿದೆ. ಯೆಸ್ ಬ್ಯಾಂಕ್ ಸಿಬ್ಬಂದಿಯ ವೃತ್ತಿಪರತೆ ಬ್ಯಾಂಕಿಂಗ್ ವಲಯದಲ್ಲಿ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಅವರಿಗೆ ಒಂದು ವರ್ಷದ ಉದ್ಯೋಗ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. 

ನಿನ್ನೆಯಷ್ಟೇ ಆರ್'ಬಿಐ ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಪ್ರಕಚಿಸಿತ್ತು. ಇದೀಗ ದೇಶದ ಪ್ರಮುಖ ಬ್ಯಾಂಕ್ ವೊಂದು ಯೆಸ್ ಬ್ಯಾಂಕ್'ನ ಶೇ.49ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ. ಬಂಡವಾಳ ಹೂಡಿಕೆಯ ನಂತರದ ಮೂರು ವರ್ಷಗಳ ಅವಧಿಯಲ್ಲಿ ಹೂಡಿಕೆಯನ್ನು ಶೇ.26ಕ್ಕಿಂತಲೂ ಕಡಿಮೆಯಾಗಲು ಅವಕಾಶವಿಲ್ಲ ಎಂದು ಆರ್'ಬಿಐ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com