ಮುಂಬೈ: ಯುವತಿಗೆ ಮರ್ಮಾಂಗ ತೋರಿಸಿದ್ದ ಕಾಮುಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಯುವತಿಗೆ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದ 22 ವರ್ಷದ ಯುವಕನಿಗೆ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

Published: 07th March 2020 01:19 AM  |   Last Updated: 07th March 2020 01:19 AM   |  A+A-


judgment1

ಸಾಂದರ್ಭಿಕ ಚಿತ್ರ

Posted By : lingaraj
Source : PTI

ಮುಂಬೈ: ಯುವತಿಗೆ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದ 22 ವರ್ಷದ ಯುವಕನಿಗೆ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

2018ರಲ್ಲಿ ತಿಲಕ್ ನಗರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು, ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಎಸ್ ಜೆ ಘರತ್ ಅವರು, ಆರೋಪಿ ವಾಸಿಮ್ ಶೇಖ್ ಐಪಿಸಿ ಸೆಕ್ಷೆನ್ 354ಎ(ಲೈಂಗಿಕ ಕಿರುಕುಳ) ಅಡಿ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಾರೆ.

12ನೇ ತರಗತಿ ವಿದ್ಯಾರ್ಥಿನಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದು, ಮಾರ್ಚ್ 18, 2018 ರಂದು, ತಿಲಕ್ ನಗರ ನಿಲ್ದಾಣದ ಬಳಿ ಇರುವ ಕಂಪ್ಯೂಟರ್ ಕೋರ್ಸ್ ಕೇಂದ್ರದ ಪ್ರತಿನಿಧಿಯನ್ನು ಭೇಟಿಯಾಗಲು ಹೋಗಿದ್ದ ವೇಳೆ ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶೇಖ್ ತನಗೆ ಮರ್ಮಾಂಗ ತೋರಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದನು ಎಂದು 17 ವರ್ಷದ ಯುವತಿ ಕೋರ್ಟ್ ಗೆ ತಿಳಿಸಿದ್ದಾರೆ.

ಶೇಕ್ ಯುವತಿನ್ನು ಅಸಭ್ಯವಾಗಿ ಮುಟ್ಟಿದ ನಂತರ ಆಕೆ ಕಿರುಚಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ನೆಹರೂ ನಗರ ಪೊಲೀಸರು, ಕಾಮುಕನನ್ನು ವಶಕ್ಕೆ ಪಡೆದಿದ್ದರು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp