ಕೋವಿಡ್-19 ರಾಜ್ಯಕ್ಕೆ ಮೂರು ಪ್ರಯೋಗಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮೈಸೂರು, ಹಾಸನ ಹಾಗೂ ಶಿವಮೊಗ್ಗ  ಸೇರಿದಂತೆ ರಾಜ್ಯದ ಮೂರು ಕಡೆ ವೈರಲ್ ರಿಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರೀಸ್(ವಿಆರ್ ಡಿಎಲ್) ತೆರೆಯಲು ಸ್ಥಳಗಳನ್ನು ಗುರುತಿಸಿದೆ.
ಕೋವಿಡ್-19 ರಾಜ್ಯಕ್ಕೆ ಮೂರು ಪ್ರಯೋಗಾಲಯ
ಕೋವಿಡ್-19 ರಾಜ್ಯಕ್ಕೆ ಮೂರು ಪ್ರಯೋಗಾಲಯ

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮೈಸೂರು, ಹಾಸನ ಹಾಗೂ ಶಿವಮೊಗ್ಗ  ಸೇರಿದಂತೆ ರಾಜ್ಯದ ಮೂರು ಕಡೆ ವೈರಲ್ ರಿಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರೀಸ್(ವಿಆರ್ ಡಿಎಲ್) ತೆರೆಯಲು ಸ್ಥಳಗಳನ್ನು ಗುರುತಿಸಿದೆ.

ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ  ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಸದ್ಯವೇ ಪ್ರಯೋಗಾಲಯ ಕಾರ್ಯಾರಂಭಗೊಳ್ಳಲಿವೆ. 

ಜೊತೆಗೆ ಬಳ್ಳಾರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಸೋಂಕು ಮಾದರಿ ಸಂಗ್ರಹ ಕೇಂದ್ರಗಳನ್ನಾಗಿ ಐಸಿಎಂಆರ್ ಗುರುತಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಹೊಸ ಪ್ರಯೋಗಾಲಯಗಳ ಆರಂಭದಿಂದ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ರಾಜೀವ್ ಗಾಂಧಿ ಎದೆ  ರೋಗಗಳ ಆಸ್ಪತ್ರೆ ಪ್ರಯೋಗಾಲಯಗಳ ಮೇಲಿನ ಒತ್ತಡ ತಗ್ಗಿಸಲು ನೆರವಾಗಲಿದೆ ಎಂದು ಸಾಂಕ್ರಾಮಿಕ ರೋಗಗಳ  ರಾಜ್ಯ ಜಂಟಿ ನಿರ್ದೇಶಕ ಬಿ.ಜಿ. ಪ್ರಕಾಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com