ಫೆ.25ರ ನಂತರ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ: ಗೃಹ ಸಚಿವ ಅಮಿತ್ ಶಾ

 "ಫೆಬ್ರವರಿ 25 ರ ನಂತರ ದೆಹಲಿಯಲ್ಲಿ ಯಾವ ಗಲಭೆಗಳು ನಡೆದಿಲ್ಲ  ಎಂದು ನಾನು ದಾಖಲೆಯಲ್ಲಿ ತೋರಿಸಲು  ಬಯಸುತ್ತೇನೆ. ಆದರೆ ಈ ಗಲಭೆಗಳನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆದಿದೆ" ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ನವದೆಹಲಿ: "ಫೆಬ್ರವರಿ 25 ರ ನಂತರ ದೆಹಲಿಯಲ್ಲಿ ಯಾವ ಗಲಭೆಗಳು ನಡೆದಿಲ್ಲ  ಎಂದು ನಾನು ದಾಖಲೆಯಲ್ಲಿ ತೋರಿಸಲು  ಬಯಸುತ್ತೇನೆ. ಆದರೆ ಈ ಗಲಭೆಗಳನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆದಿದೆ" ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶಾ ಅವರು ಬುಧವಾರ ಲೋಕಸಭೆಯಲ್ಲಿ ಮಾತನಾಡಿ  ದೆಹಲಿ ಗಲಭೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದರು, ಆದರೆ ಹಿಂಸಾಚಾರವನ್ನು ತಹಬಂದಿಗೆ ತಂದ  ದೆಹಲಿ ಪೊಲೀಸರ ಪಾತ್ರವನ್ನು ಸಮರ್ಥಿಸಿಕೊಂಡರು.

ದೆಹಲಿ ಪೊಲೀಸರನ್ನು ಶಾ ಸಮರ್ಥಿಸಿಕೊಂಡರು. ಗಲಭೆ ನಿಯಂತ್ರಣಕ್ಕೆ ಪೋಲೀಸರು ಸಾಕಷ್ಟು ಶ್ರಮಿಸಲಿಲ್ಲ ಎಂದು ಪ್ರತಿಪಕ್ಷಗಳು ತೀವ್ರ ಟೀಕೆಯನ್ನು ಮಾಡಿದ್ದವು."ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.  ಆದರೆ ಪೋಲೀಸರು ಸಹ ಸ್ಥಳದಲ್ಲಿದರು. ಪೊಲೀಸರು ಸಹ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತಾರೆ. ಗಲಭೆಗಳನ್ನು ಇತರ ಪ್ರದೇಶಗಳಿಗೆ ಹರಡಲು ಅವಕಾಶ ಕೊಡದ್ದಕ್ಕಾಗಿ ದೆಹಲಿ ಪೊಲೀಸರನ್ನು ನಾನು ಪ್ರಶಂಸಿಸುತ್ತೇನೆ. , "ಅವರು ಹೇಳಿದರು

ದೆಹಲಿ ಪೊಲೀಸರು 36 ಗಂಟೆಗಳಲ್ಲಿ ಗಲಭೆಯನ್ನು ನಿಯಂತ್ರಿಸಿದ್ದಾರೆ ಎಂದು ಶಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಶಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಾವು ತಾಜ್ ಮಹಲ್ ಗೆ ಹೋಗಲಿಲ್ಲ ಅಥವಾ ರಾಷ್ಟ್ರಪತಿಗಳೊಡನೆ ಭೋಜನಕೂಟದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ ಅವರು, ಬದಲಿಗೆ ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಕಾರ್ಯತಂತ್ರ ರೂಪಿಸುತ್ತಿದ್ದದ್ದಾಗಿ ಹೇಳಿದ್ದಾರೆ. 

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ಇತ್ತದ್ದು ನನ್ನ ಒತ್ತಾಯದಿಂದ. ಪರಿಸ್ಥಿತಿಯನ್ನು ನಿಯಂತ್ರಿಸುವುದು ನಮ್ಮ ಪ್ರಥಮ ಆದ್ಯತೆಯಾಗಿತ್ತು. ಈಶಾನ್ಯ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಲ್ಲಿನ ಕಿರಿದಾದ ಹಾದಿಗಳು ದೆಹಲಿ ಅಗ್ನಿಶಾಮಕ ಸೇವೆಗೆ ತಕ್ಷಣವೇ ಸ್ಥಳವನ್ನು ತಲುಪಲು ಕಷ್ಟಕರವಾಗಿಸಿತ್ತು ಎಂದು ಶಾ ಲೋಕಸಭೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com