ಸುಪ್ರೀಂ, ದೆಹಲಿ ಹೈಕೋರ್ಟ್ ಗೂ ತಟ್ಟಿದ 'ಕೊರೋನಾ'ಬಿಸಿ: ಮಾರ್ಚ್ 16ರಿಂದ ತುರ್ತು ವಿಚಾರಣೆ ಮಾತ್ರ!

ಕೊರೋನಾ ವೈರಸ್ ಭೀತಿ ಸುಪ್ರೀಂ ಕೋರ್ಟ್ ವರೆಗೆ ತಲುಪಿದೆ. ಇದೇ 16ರಿಂದ ತುರ್ತು ವಿಚಾರಣೆ ಮಾತ್ರ ನಡೆಸಲಿದ್ದು ನ್ಯಾಯಾಲಯದ ಕೊಠಡಿಯೊಳಗೆ ಸಂಬಂಧಪಟ್ಟ ವಕೀಲರು ಬಿಟ್ಟರೆ ಬೇರೆ ಯಾರನ್ನೂ ಒಳಗೆ ಬಿಡುವುದಿಲ್ಲ.
ಸುಪ್ರೀಂ, ದೆಹಲಿ ಹೈಕೋರ್ಟ್ ಗೂ ತಟ್ಟಿದ 'ಕೊರೋನಾ'ಬಿಸಿ: ಮಾರ್ಚ್ 16ರಿಂದ ತುರ್ತು ವಿಚಾರಣೆ ಮಾತ್ರ!

ನವದೆಹಲಿ: ಕೊರೋನಾ ವೈರಸ್ ಬಿಸಿ ಸುಪ್ರೀಂ ಕೋರ್ಟ್ ಗೂ ತಟ್ಟಿದೆ. ಇದೇ 16ರಿಂದ ತುರ್ತು ವಿಚಾರಣೆ ಮಾತ್ರ ನಡೆಸಲಿದ್ದು ನ್ಯಾಯಾಲಯದ ಕೊಠಡಿಯೊಳಗೆ ಸಂಬಂಧಪಟ್ಟ ವಕೀಲರು ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿರುವುದಿಲ್ಲ.

ಮಾರ್ಚ್ 16ರ ನಂತರ ಕೆಲ ದಿನಗಳವರೆಗೆ ಸುಪ್ರೀಂ ಕೋರ್ಟ್ ನ 14 ನ್ಯಾಯಪೀಠಗಳ ಬದಲಿಗೆ ಕೇವಲ 6 ನ್ಯಾಯಪೀಠಗಳು ಕಾರ್ಯನಿರ್ವಹಿಸಲಿವೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19ನ್ನು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿದ ನಂತರ ಭಾರತ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನಿವಾಸದಲ್ಲಿ ನಿನ್ನೆ ಮತ್ತು ಮೊನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಸುಪ್ರೀಂ ಕೋರ್ಟ್ ಅಧಿಸೂಚನೆಯನ್ನು ಅದರ ಪ್ರಧಾನ ಕಾರ್ಯದರ್ಶಿ ಸಂಜೀವ್ ಎಸ್ ಕಲ್ಗಾಂವ್ ಕರ್ ಹೊರಡಿಸಿದ್ದು, ಇನ್ನು ಕೆಲ ದಿನಗಳವರೆಗೆ ತುರ್ತು ವಿಚಾರಣೆಯನ್ನು ಮಾತ್ರ ನಡೆಸಲಾಗುವುದು. ವಿಚಾರಣೆ ವೇಳೆ ಅಗತ್ಯ ಸಂಬಂಧಪಟ್ಟವರು ಮಾತ್ರ ಕೋರ್ಟ್ ಸಭಾಂಗಣದಲ್ಲಿ ಇರಬೇಕಾಗುತ್ತದೆ ಎಂದರು. 

ಸುಪ್ರೀಂ ಕೋರ್ಟ್ ಘೋಷಣೆ ಹೊರಬರುತ್ತಿದ್ದಂತೆ ದೆಹಲಿ ಹೈಕೋರ್ಟ್ ಸಹ ನಿನ್ನೆ ತುರ್ತು ಕ್ರಮ ಕೈಗೊಂಡಿದ್ದು ಮಾರ್ಚ್ 16ರ ನಂತರ ತುರ್ತು ವಿಚಾರಣೆ ಮಾತ್ರ ನಡೆಸಲಾಗುವುದು ಎಂದು ಹೇಳಿದೆ. ಅಗತ್ಯಬಿದ್ದರೆ ಮಾತ್ರ ಕಕ್ಷಿದಾರರು ಮತ್ತು ಅವರ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಭೆಯ ನಂತರ ಕೋರ್ಟ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com