ಯೋಧನಲ್ಲಿ ಕೊರೋನಾ ಪಾಸಿಟಿವ್: ಎಚ್ಚೆತ್ತ ಸೇನಾಪಡೆ, ದಿನಕ್ಕೆರಡು ಬಾರಿ ಸೈನಿಕರ ಆರೋಗ್ಯ ತಪಾಸಣೆ 

ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ಇದೀಗ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯೋಧರೊಬ್ಬರಲ್ಲಿ ಕೊರೋನಾ ದೃಢಪಟ್ಟ ಬೆನ್ನಲ್ಲೇ ದಿನಕ್ಕೆರಡು ಬಾರಿ ಪ್ರತೀ ಸೈನಿಕನ ಆರೋಗ್ಯ ತಪಾಸಣೆ ನಡೆಸಲು ನಿರ್ಧಾರ ಕೈಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ಇದೀಗ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯೋಧರೊಬ್ಬರಲ್ಲಿ ಕೊರೋನಾ ದೃಢಪಟ್ಟ ಬೆನ್ನಲ್ಲೇ ದಿನಕ್ಕೆರಡು ಬಾರಿ ಪ್ರತೀ ಸೈನಿಕನ ಆರೋಗ್ಯ ತಪಾಸಣೆ ನಡೆಸಲು ನಿರ್ಧಾರ ಕೈಗೊಂಡಿದೆ. 

ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿರುವ ಎಲ್ಲಾ ಸೇನಾ ಘಟಕಗಳಿಗ ಸೂಚನೆ ನೀಡಿರುವ ಭಾರತೀಯ ಸೇನಾಪಡೆ, 1.2 ಮಿಲಿಯನ್ ಯೋಧರ ಆರೋಗ್ಯವನ್ನು ದಿನಕ್ಕೆರಡು ಬಾರಿ ಪರಿಶೀಲನೆ ನಡೆಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಜನನಿಬಿಡ ಪ್ರದೇಶಗಳಿಂದ ದೂರ ಇರುವಂತೆ ಯೋಧರು ಹಾಗೂ ಎಲ್ಲಾ ಅಧಿಕಾರಿಗಳಿಗೆ ಸಲಹೆ ನೀಡಿದೆ ಎನ್ನಲಾಗುತ್ತಿದೆ. 

ಬೆಳಗಿನ ಪರೇಡ್ ವೇಳೆ ಮೊದಲ ಬಾರಿಗೆ ಯೋಧರನ್ನು ತಪಾಸಣೆ ನಡೆಸಲಾಗುತ್ತಿದ್ದು, ನಂತರ ಸಂಜೆ ವೇಳೆ ಕೂಡ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ವೇಳೆ ಎಲ್ಲಾ ವೈದ್ಯಕೀಯ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸ್ಥಳದಲ್ಲಿರಲಿದ್ದಾರೆ. ಒಂದು ವೇಳೆ ಯಾವುದೇ ಯೋಧರಲ್ಲಿ ಕೆಮ್ಮು, ಶೀತ ಹಾಗೂ ಜ್ವರ ಕಂಡು ಬಂದಿದ್ದೇ ಆದಲ್ಲಿ ಅವರನ್ನು ಸ್ಥಳೀಯ ಸೇನಾ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಹಿಂದೆ ಲೇನಲ್ಲಿರುವ ಚುಹೋತ್ ಗ್ರಾಮದ ನಿವಾಸಿಯಾಗಿದ್ದ 34 ವರ್ಷದ ಯೋಧರೊಬ್ಬರಲ್ಲಿ ವೈರಸ್ ದೃಢಪಟ್ಟಿತ್ತು. ಯೋಧನ ತಂದೆ ಇರಾನ್ ನಿಂದ ತೀರ್ಥ ಯಾತ್ರೆ ಮುಗಿಸಿ ಏರ್ ಇಂಡಿಯಾ ವಿಮಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಹಿಂದಿರುಗಿದ್ದರು. ಕೊರೋನಾ ಸೋಂಕು ದೃಢಪಟ್ಟ ಬಳಿಕ ಲಡಾಕ್ ಹಾರ್ಟ್ ಫೌಂಡೇಶನ್ ನಲ್ಲಿ ಫೆಬ್ರವರಿ 29 ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊರೋನಾ ಸೋಂಕಿತ ಯೋಧ ಫೆಬ್ರವರಿ 25 ರಿಂದ ರಜೆಯಲ್ಲಿದ್ದು, ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ್ದರು. ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಯೋಧನನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿತ್ತು. ಮಾ.16ರಂದು ಯೋಧನಕ್ಕಿ ವೈರಸ್ ಇರುವುದು ದೃಢಪಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com