ಕೊರೋನಾ ಸೋಂಕಿತರ ಬಟ್ಟೆ ಒಗೆಯುವುದಿಲ್ಲ: ಆಸ್ಪತ್ರೆಗಳಿಗೆ ಹೊಸ ತಲೆನೋವು ತಂದಿತ್ತ 'ಡೋಬಿಗಳು'

ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಆಸ್ಪತ್ರೆಗಳಿಗೆ ಇದೀಗ ಹೊಸ ತಲೆನೋವು ಆರಂಭವಾಗಿದ್ದು, ಕೊರೋನಾ ಸೋಂಕಿತರ ಬಟ್ಟೆಗಳನ್ನು ನಾವು ಒಗೆಯುವುದಿಲ್ಲ ಎಂದು ಡೋಬಿಗಳು ಹಠ ಹಡಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಆಸ್ಪತ್ರೆಗಳಿಗೆ ಇದೀಗ ಹೊಸ ತಲೆನೋವು ಆರಂಭವಾಗಿದ್ದು, ಕೊರೋನಾ ಸೋಂಕಿತರ ಬಟ್ಟೆಗಳನ್ನು ನಾವು ಒಗೆಯುವುದಿಲ್ಲ ಎಂದು ಡೋಬಿಗಳು ಹಠ ಹಡಿದಿದ್ದಾರೆ.

ವಿಶ್ವಾಂದ್ಯತ ಸುಮಾರು 8 ಸಾವಿರಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಗೆ ಭಾರತದಲ್ಲಿಯೂ ಸುಮಾರು 160ಕ್ಕೂ ಹೆಚು ಮಂದಿ ಸೋಂಕಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಆಸ್ಪತ್ರೆಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನಾ ಮಾರಿಯನ್ನು ಹಿಮ್ಮೆಟಿಸಲು ಹರಸಾಹಸ ಪಡುತ್ತಿದೆ. ಆದರೆ ಆಸ್ಪತ್ರೆಗಳ ಈ ಕಾರ್ಯಕ್ಕೆ ಕೊರೋನಾ ವೈರಸ್ ಭೀತಿ ಅಡ್ಡಿಯಾಗಿದ್ದು, ಆಸ್ಪತ್ರೆಯ ಬಟ್ಟೆಗಳನ್ನು ಒಗೆಯುತ್ತಿದ್ದ ಡೋಬಿಗಳು ಇದೀಗ ಸೋಂಕಿತರ ಬಟ್ಟೆಗಳನ್ನು ಒಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸೋಂಕು ಪೀಡಿತ ರೋಗಿಗಳ ಬಟ್ಟೆಗಳನ್ನು ಒಗೆಯುವುದರಿಂದ ನಮಗೂ ಸೋಂಕು ತಗುಲಬಹುದು ಎಂಬ ಭೀತಿಯಿಂದಾಗಿ ಡೋಬಿಗಳು ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಅಶೋಕ್ ಚೌದರಿ ಎಂಬುವವರು ರೋಗಿಗಳ ಬಟ್ಟೆಗಳನ್ನು ಒಗೆಯುವುದರಿಂದ ಆ ವೈರಸ್ ನಮಗೂ ಅಂಟಿಕೊಳ್ಳುವ ಭೀತಿ ಇದೆ. ಹೀಗಾಗಿ ನಾವು ಕೊರೋನಾ ವೈರಸ್ ಸೋಂಕಿತ ರೋಗಿಗಳ ಬಟ್ಟೆ ಒಗೆಯದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com