ನಿರ್ಭಯಾ ತಾಯಿ, ಅತ್ಯಾಚಾರಿಗಳು
ದೇಶ
ಸುಪ್ರೀಂನಲ್ಲೂ ಅತ್ಯಾಚಾರಿಗಳ ಅರ್ಜಿ ವಜಾ: ಗಲ್ಲು ಶಿಕ್ಷೆಗೆ ಕ್ಷಣಗಣನೆ
ಗಲ್ಲು ಶಿಕ್ಷೆ ಜಾರಿಗೆ ಕೆಲವೇ ತಾಸುಗಳು ಬಾಕಿ ಇರುವಂತೆ ನಿರ್ಭಯಾ ಪ್ರಕರಣದ ಅಪರಾಧಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮರುಪರಿಶೀಲನಾ ಅರ್ಜಿ ಕೂಡಾ ವಜಾ ಆಗಿದೆ
ನವದೆಹಲಿ: ಗಲ್ಲು ಶಿಕ್ಷೆ ಜಾರಿಗೆ ಕೆಲವೇ ತಾಸುಗಳು ಬಾಕಿ ಇರುವಂತೆ ನಿರ್ಭಯಾ ಪ್ರಕರಣದ ಅಪರಾಧಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮರುಪರಿಶೀಲನಾ ಅರ್ಜಿ ಕೂಡಾ ವಜಾ ಆಗಿದೆ
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಾದ ವಿವಾದದ ಬಳಿಕ ಭಾರತದ ರಾಷ್ಟ್ರಪತಿಗಳ ನಿರ್ಧಾರವನ್ನು ಪರಿಶೀಲಿಸಲು ನಮಗೆ ಯಾವುದೇ ಆಧಾರಗಳಿಲ್ಲ "ಎಂದು ಹೇಳಿದ ನ್ಯಾಯಮೂರ್ತಿ ಆರ್.ಭಾನುಮತಿ ನೇತೃತ್ವದ ನ್ಯಾಯಪೀಠ, ಅತ್ಯಾಚಾರಿಗಳು ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಹಾಗೂ ಪಟಿಯಾಲ ಕೋರ್ಟ್ ಕೂಡಾ ಅತ್ಯಾಚಾರಿಗಳ ಅರ್ಜಿಗಳನ್ನು ವಜಾಗೊಳಿಸಿತ್ತು.
ಅತ್ಯಾಚಾರಿಗಳಿಗೆ ಈಗ ತಕ್ಕ ಶಿಕ್ಷೆಯಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ದೊರಕಿದೆ ಎಂದು ನಿರ್ಭಯಾ ತಾಯಿ ಆಶಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ