ನಿರ್ಭಯಾ 'ಹತ್ಯಾಚಾರಿ'ಗಳಿಗೆ ಗಲ್ಲು: 7 ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಸಿಕ್ಕ ಜಯ, ಎಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

2012 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದ್ದು, 7 ವರ್ಷಗಳ ಸತತ ಹೋರಾಟದಲ್ಲಿ ಕೊನೆಗೂ ವಿಜಯ ದೊರಕಿದಂತಾಗಿದೆ. ಅತ್ತ ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ, ಇತ್ತ ಪಾಪಿಗಳ ಸಂಹಾರವಾಯಿತೆಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2012 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದ್ದು, 7 ವರ್ಷಗಳ ಸತತ ಹೋರಾಟದಲ್ಲಿ ಕೊನೆಗೂ ವಿಜಯ ದೊರಕಿದಂತಾಗಿದೆ. ಅತ್ತ ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ, ಇತ್ತ ಪಾಪಿಗಳ ಸಂಹಾರವಾಯಿತೆಂದು ದೇಶದಾದ್ಯಂತ ಸಂಭ್ರಮವನ್ನು ಆಚರಿಸಲಾಗುತ್ತಿದೆ. 

ನೇಣಿಗೆ ಶರಣಾದ ನಾಲ್ವರು ದೋಷಿಗಳೂ ಇಡೀ ದೇಶವೇ ದ್ವೇಷಿದ್ದ ಪರಮ ಪಾಪಿಗಳಾಗಿದ್ದು, ಕೊನೆಗೂ ಅವರ ಸಂಹಾರವಾಗಿದೆ. ಇದರಿಂದ ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ. ಅಲ್ಲದೆ, ನಿರ್ಭಯಾ ಪೋಷಕರ ನಿರಂತರ ಹೋರಾಟಕ್ಕೂ ಜಯ ಸಿಕ್ಕಂತಾಗಿದೆ.

ಹತ್ಯಾಚಾರಿಗಳ ಗಲ್ಲು ಕೇವಲ ನಿರ್ಭಯಾ ಪೋಷಕರಿಗಷ್ಟೇ ಸಂತಸವನ್ನು ತಂದಿಲ್ಲ. ಇಡೀ ದೇಶದ ಜನತೆಗೆ ಸಂತಸವನ್ನು ತಂದಿದೆ. ಹಂತಕರಿಗೆ ಶಿಕ್ಷೆಯಾಗುತ್ತಿದ್ದಂತೇಯ ಇಡೀ ದೇಶ ಸಂಭ್ರಮವನ್ನಾಚರಿಸುತ್ತಿದೆ. 

ಹತ್ಯಾಚಾರಿಗಳಿಗೆ ಶಿಕ್ಷೆ ಪ್ರಕಟವಾಗುವ ಸುದ್ದಿ ತಿಳಿಯುತ್ತಿದ್ದಂತೆಯೇ ಜೈಲಿನ ಹೊರ ಭಾಗಕ್ಕೆ ಬರಲು ಆರಂಭಿಸಿದ್ದರು. ದೋಷಿಗಳು ನೇಣಿನ ಕುಣಿಕೆಗೆ ತಲೆಯೊಡ್ಡುವ ಸಮಯವನ್ನೇ ಕಾಯುತ್ತಿದ್ದ ಜನತೆ, ಆ ಸಮಯ ಬರುತ್ತಿದ್ದಂತೆಯೇ ವಿಜಯದ ಘೋಷಣೆ ಕೂಗಲು ಆರಂಭಿಸಿದರು. ನ್ಯಾಯ ಸಿಕ್ಕಿತು. ಕೆಲವರು ರಾಷ್ಟ್ರಧ್ವಜವನ್ನು ಹಿಡಿದು ನ್ಯಾಯಾಲಯ ತೀರ್ಪನ್ನು ಕೊಂಡಾಡಿದರು. ಇನ್ನೂ ಕೆಲವರು ನಿರ್ಭಯಾ ಜಿಂದಾಬಾದ್ ಎಂದು ಕೂಗಿದ್ದು, ದುಷ್ಟರ ವಿರುದ್ಧ ರಾಷ್ಟ್ರಕ್ಕೆ ಜಯ ಸಿಕ್ಕಿದೆ ಎಂದು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಶುಭಾಶಯಗಳನ್ನು ಹಂಚಿಕೊಂಡಲು. 

ಹೆಣ್ಣು ಮಕ್ಕಳು ದೇವರು ಕೊಟ್ಟ ವರ. ಮಹಿಳೆಯರನ್ನು ಗೌರವದಿಂದ ಆಟಿಕೆಗಳನ್ನಾಗಿ ಮಾಡದಿರಿ. ಆ ರೀತಿ ನಡೆದುಕೊಂಡಿದ್ದೇ ಆದರೆ, ಈ ನಾಲ್ವರು ಪುರುಷರಿಗೆ ಬಂದ ಸ್ಥಿತಿಯೇ ನಿಮಗೂ ಬರುತ್ತದೆ. ಮಹಿಳೆಯರನ್ನು ಸದಾಕಾಲ ಗೌರವಿಸಿ. ಇದು ಸಮಾಜಕ್ಕೆ ಕಳುಹಿಸಲಾದ ಅತ್ಯಂತ ಸಕಾರಾತ್ಮಕ ಸಂದೇಶವಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ನಿರ್ಭಯಾಗಗೆ ನ್ಯಾಯ ಸಿಕ್ಕಿದೆ. ಭಾರತದ ಪ್ರತೀ ಮಗಳಿಗೂ ನ್ಯಾಯ ಸಿಕ್ಕಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com