21 ದಿನಗಳ ಲಾಕ್‌ಡೌನ್ ಕೊರೋನಾವನ್ನು ನಿಯಂತ್ರಿಸಲಿದೆ ಎನ್ನಲು ವೈಜ್ಞಾನಿಕ ಆಧಾರಗಳಿಲ್ಲ: ಪ್ರಶಾಂತ್ ಕಿಶೋರ್

ಕೊರೋನಾ ತಡೆಗಾಗಿ ರಾಷ್ಟ್ರದಲ್ಲಿ ಮೂರು ವಾರಗಳ ಕಾಲ ಲಾಕ್ ಡೌನ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ನಿರ್ಧಾರದ ಬಗೆಗೆ ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಕೊರೋನಾ ತಡೆಗಾಗಿ ರಾಷ್ಟ್ರದಲ್ಲಿ ಮೂರು ವಾರಗಳ ಕಾಲ ಲಾಕ್ ಡೌನ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ನಿರ್ಧಾರದ ಬಗೆಗೆ ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ದೇಅದಲ್ಲಿ ಮಹಾಮಾರಿಯನ್ನು ತೊಲಗಿಸಲು ತೆಗೆದುಕೊಂಡ ಕ್ರಮಗಳಲ್ಲಿ ಬಡವರ ಪರ ಕಾಳಜಿ ಅತ್ಯಂತ ಕನಿಷ್ಟವಾಗಿದೆ ಎಂದು ಒತ್ತಿ ಹೇಳಿದ್ದಾರೆ.

"#Lockdownindia ನಿರ್ಧಾರ ಸರಿಯಾದದ್ದಾಗಿರಬಹುದು ಆದರೆ 21 ದಿನಗಳು ಎನ್ನುವುದು ತುಸು ದೀರ್ಘವಾಯಿತು. ಅಲ್ಲದೆ ಇದು ಜನರು ಪಾವತಿಸುವ ಬೆಲೆಯಾಗಿದೆ. ಕೊರೋನಾವೈರಸ್ ಎದುರಿಸಲು ಸಿದ್ಧತೆಯು ಬಡವರನ್ನು ರಕ್ಷಿಸಲು ತೀರಾ ಕಳಪೆ ಉಪಕ್ರಮ ತೆಗೆದುಕೊಳ್ಳಲಾಗಿದೆ.ನಾವು ಮುಂದೆ ಕೆಲವು ಕಠಿಣ ದಿನಗಳನ್ನು ನೋಡಲಿದ್ದೇವೆ" ಕಿಶೋರ್ ಟ್ವೀಟ್ ಮಾಡಿದ್ದಾರೆ.

ಜೆಡಿಯು ಪಕ್ಷದ ಅಧ್ಯಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದ ಕಾರಣ ತ್ತೀಚೆಗೆ ಜೆಡಿಯುನಿಂದ ವಜಾಗೊಳಿಸಲ್ಪಟ್ಟ 43 ವರ್ಷದ ಪ್ರಶಾಂತ್ ಕಿಶೋರ್ ಅವರಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸಹ ತಿರುಗೇಟು ಕೊಟ್ಟಿದ್ದಾರೆ.

ದಯವಿಟ್ಟು ಟ್ವೀಟ್ ಗೆ ಪ್ರತಿಕ್ರಿಯಿಸಿ ವೈಜ್ಞಾನಿಕ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳದೆ ಹೇಳಿಕೆಗಳನ್ನು ನೀಡಬಾರದು. ಇದು ಸರಿಯಾದ ನಡೆ ಎಂದು ನಾನು ನಂಬುತ್ತೇನೆ ಮತ್ತು ಹೆಚ್ಚಿನ ಡೇಟಾದ  ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ- ಶಾ ಹೇಳಿದ್ದಾರೆ.

ಸಮರ್ಪಕ ಪರೀಕ್ಷೆ, ಪ್ರತ್ಯೇಕತೆ ಮತ್ತು ಚಿಕಿತ್ಸೆಯ ಕ್ರಮಗಳಿಲ್ಲದೆ ಕೇವಲ 21 ದಿನಗಳ ಲಾಕ್‌ಡೌನ್ ಕೋವಿಡ್ ರೋಗವನ್ನು ನಿಲ್ಲಿಸಬಹುದು ಎಂದು ಸೂಚಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜೊತೆಗೆ, ಕೆಟ್ಟದಾಗಿ ಕಾರ್ಯಗತಗೊಳಿಸಿದ ಲಾಕ್‌ಡೌನ್ ತನ್ನ ಗುರಿಯನ್ನು ಸಾಧಿಸದಿದ್ದರೂ, ಅದು ಖಂಡಿತವಾಗಿಯೂ ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯವನ್ನು ನಾಶಪಡಿಸುತ್ತದೆ  ಎಂದು ಕಿಶೋರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com