"ನನ್ನಂತಹ ಬೀದಿ ಬದಿಯ ನಿರಾಶ್ರಿತರಿಗೆ ಸೆಲ್ಫ್ ಕ್ವಾರಂಟೈನ್ ಹೇಗೆ"

"ನಮ್ಮನ್ನು ನಾವು ಸ್ವಯಂ ನಿರ್ಬಂಧಿಸಿಕೊಳ್ಳುವುದು ನಮ್ಮಂತಹಾ ಮನೆಗಳಿಲ್ಲದ ನಿರ್ಗತಿಕರಿಗೆ ಕಠಿಣವಾಗಲಿದೆ." 68 ವರ್ಷದ ರೂಪಾ ಎಂಬ ಮಹಿಳೆ ಹೇಳಿದ್ದಾರೆ. ಅವರು ದೆಹಲಿಯ ದೆಹಲಿ-ಎನ್‌ಸಿಆರ್‌ನ  ಫೂಟ್ ಪಾತಿನಲ್ಲಿ ವಾಸವಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: "ನಮ್ಮನ್ನು ನಾವು ಸ್ವಯಂ ನಿರ್ಬಂಧಿಸಿಕೊಳ್ಳುವುದು ನಮ್ಮಂತಹಾ ಮನೆಗಳಿಲ್ಲದ ನಿರ್ಗತಿಕರಿಗೆ ಕಠಿಣವಾಗಲಿದೆ." 68 ವರ್ಷದ ರೂಪಾ ಎಂಬ ಮಹಿಳೆ ಹೇಳಿದ್ದಾರೆ. ಅವರು ದೆಹಲಿಯ ದೆಹಲಿ-ಎನ್‌ಸಿಆರ್‌ನ  ಫೂಟ್ ಪಾತಿನಲ್ಲಿ ವಾಸವಿದ್ದಾರೆ.

ಪ್ರಸ್ತುತ ನೋಯ್ಡಾ ಮೆಟ್ರೋ ನಿಲ್ದಾಣದ ಬಳಿ ವಾಸಿಸುತ್ತಿರುವ ರೂಪಾ, ತನ್ನ ಸುತ್ತ ನಡೆಯುತ್ತಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಖಾಲಿ ರಸ್ತೆಗಳು ಅಥವಾ ಹೆಚ್ಚಿನ ಅಂಗಡಿಗಳ ಮುಚ್ಚಿರುವಿಕೆ ಯಾವುದೂ ಆಕೆಯ ಗಮನ ಸೆಳೆದಿಲ್ಲ. ಬದಲಿಗೆ ಆಕೆ ಅರಿತಿರುವುದು ಇಷ್ಟೇ- ಜನರು ಮನೆಗಳಲ್ಲೇ ಉಳಿಯಬೇಕಾದ ಭಯಂಕರ ಕಾಯಿಲೆಯೊಂದು ಬಂದಿದೆ.

"ಆದರೆ ನಮ್ಮನ್ನು ಸ್ವಯಂ-ನಿರ್ಬಂಧಿಸಿಕೊಳ್ಳುವುದು ನನ್ನಂತಹಾ ಮನೆಗಳಿಲ್ಲದ ನಿರ್ಗತಿಕರಿಗೆ ಕಠಿಣವಾಗುತ್ತದೆ" ಎಂದು ಅವರು ಹೇಳಿದರು. ವೈರಸ್ ಸೋಂಕಿಗೆ ಒಳಗಾಗುವುದರ ಬಗ್ಗೆ ಕೇಳಿದಾಗ "ನಾನು ಇದಕ್ಕಿಂತ ಕೆಟ್ಟದ್ದನ್ನು ಕಂಡಿದ್ದೇನೆ. ಕೊರೋನಾ ಎನ್ನುವುದು ನನ್ನ ಪಾಲಿಗೆ ಜ್ವರಕ್ಕಿಂತ ಬೇರೆ ಏನೂ ಅಲ್ಲ." ಎಂದಿಅರು.

"ಆಹಾರವನ್ನು ಪಡೆಯುವುದು ನನ್ನ ಮುಖ್ಯ ಕಾಳಜಿಯೇ ಹೊರತು ಕೊರೋನಾವೈರಸ್ ಅಲ್ಲ." ಎಂದು ಅವರು ಹೇಳಿದರು. "ನಾನು ಆಶ್ರಯ ಮನೆಗೆ ಹೋಗಿದ್ದೆ ಆದರೆ ಅಲ್ಲಿ ನಾನು ಬೇರೆ ಯಾವುದಾದರೂ ರೋಗ ಹತ್ತಿಸಿಕೊಳ್ಳುವೆ ಎಂಬ ಭಯ ಹತ್ತಿಕೊಂಡಿತ್ತು." ಎಂದು ರೂಪಾ  ಹೇಳಿದ್ದಾರೆ. ಆದರೆ ಆಕೆ ತಾನು ತಂಗಿದ್ದ ಆಶ್ರಯ ಮನೆಯ ವಿವರ ತಿಳಿಸಲು ಅವರು ನಿರಾಕರಿಸಿದ್ದಾರೆ.

ಸ್ವಲ್ಪ ದೂರದಲ್ಲಿ, ೪೦-೪೫ರ ವಯೋಮಾನದ ಇನ್ನೋರ್ವ ನಿರ್ಗತಿಕ ವ್ಯಕ್ತಿ ಇದ್ದು ಘನಶ್ಯಾಮ ಎಂಬ ಆತ ಕಳೆದ ಕೆಲವು ದಿನಗಳಲ್ಲಿ ಆಹಾರವನ್ನು ಹೇಗೆ ಸಂಗ್ರಹಿಸುವುದು ಎಂಬುದರ ಬಗೆಗೆ ಹೆಚ್ಚು ಚಿಂತಿತರಾಗಿದ್ದರು."ನನ್ನ ಚಿಂತೆ ರೋಗದ ಬಗ್ಗೆ ಅಲ್ಲ, ಆದರೆ ಆಹಾರವನ್ನು ಪಡೆಯುವುದರ ಬಗೆಗಿದೆ.  ಎಲ್ಲಾ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ನಾನು ಭಿಕ್ಷೆ ಬೇಡಿ ತಿನ್ನುತ್ತಿದ್ದೆ. ಆದರೆ ಈಗ  ನನಗೆ ಭಿಕ್ಷೆ ನೀಡಲು ಯಾರೂ ಇಲ್ಲ" ಎಂದು ಅವರು ಹೇಳಿದರು.

ಭಾರತವು ತನ್ನ ಇತಿಹಾಸದಲ್ಲಿ ಅತಿದೊಡ್ಡ ಲಾಕ್‌ಡೌನ್ ಅನ್ನು ಕಾಣುತ್ತಿದೆ. ಕೊರೋನಾವೈರಸ್  ದೃಷ್ಟಿಯಿಂದ ಎಲ್ಲಾ 1.3 ಬಿಲಿಯನ್ ಜನರು ಮೂರು ವಾರಗಳ ಕಾಲ ಮನೆಯಲ್ಲೇ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕೊರೋನಾ ಇದುವರೆಗೆ ದೇಶದಲ್ಲಿ ಹದಿನೆಂಟು ಜೀವಗಳನ್ನು ಬಲಿ ಪಡೆದಿದ್ದು  700 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ಲಾಕ್‌ಡೌನ್ ಘೋಷಣೆಯಾದಾಗಿನಿಂದ ಕಸದ ರಾಶಿಯಲ್ಲಿ ಸಿಕ್ಕ ಆಹಾರವನ್ನು ತಿನ್ನುತ್ತಾ ಬದುಕಿದ್ದೇನೆ, ಆದರೆ ಪರಿಸ್ಥಿತಿ ಮುಂದುವರಿದರೆ ಈ ಮೂಲವೂ ಕ್ಷೀಣಿಸುತ್ತದೆ ಎಂಬ ಆತಂಕವಿದೆ ಎಂದು ಘನಶ್ಯಾಮ್ ಹೇಳಿದರು ಕೊರೋನಾವೈರಸ್ ಹರಡುವಿಕೆ ತಡೆಗೆ ವಿಧಿಸಲಾದ ಲಾಕ್‌ಡೌನ್ ಮಧ್ಯೆ ಬಡ ಮತ್ತು ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸಲು ಸಮುದಾಯ ಅಡಿಗೆಮನೆಗಳನ್ನು ಪ್ರಾರಂಭಿಸಲು ಉತ್ತರ ಪ್ರದೇಶ ಸರ್ಕಾರ ಗುರುವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದರೆ ದೈನಂದಿನ ಕೂಲಿ ನೌಕರರಾದ ರಮೇಶ್  ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅನುಮಾನಗಳನ್ನು ಹೊಂದಿದ್ದಾರೆ. "ನಾವು ಈ ಅಡಿಗೆಮನೆಗಳನ್ನು ಹೇಗೆ ತಲುಪುತ್ತೇವೆ, ನಾವು ನಡೆದು ಹೋದರೆ ಪೊಲೀಸರು ತಡೆದು ಪ್ರಶ್ನಿಸುತ್ತಾರೆ. ನಾವು ಅಲ್ಲಿಗೆ ಹೇಗೆ ತಲುಪುತ್ತೇವೆ?" 

ಕನ್ಸ್ಟ್ರಕ್ಷನ್ ಕಾರ್ಖಾನೆಯೊಂದರ ದಿನಗೂಲಿ ಕಾರ್ಮಿಕರಾಗಿರುವ ರಮೇಶ್ ಕಾರ್ಖಾನೆ ಬೀಗ ಹಾಕಿದಾಗಿನಿಂದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.2011 ರ ಜನಗಣತಿಯ ಪ್ರಕಾರ, ಭಾರತವು 17 ಲಕ್ಷ ನಿರಾಶ್ರಿತರನ್ನು ಹೊಂದಿದೆ. ಅವರು ಬೀದಿಯಲ್ಲಿರುವ ಕಾರಣ ಕೋವಿಡ್ ಗೆ ಬಹುಬೇಗ ಗುರಿಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com