ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ 

ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ. 
ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ
ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ

ಪುಣೆ: ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ. 

ಪುಣೆಯ ವಿಜ್ಞಾನಿಗಳು ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನ ಸಹಾಯದಿಂದ ಸೆರೆ ಹಿಡಿದಿರುವ ಈ ವಿಡಿಯೋ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟವಾಗಿದೆ. 

ಜ.30, 2020 ರಂದು ದೇಶದಲ್ಲಿ ವರದಿಯಾಗಿದ್ದ, ದೃಢಪಟ್ಟಿದ್ದ ಮೊದಲ ಕೊರೋನಾ ವೈರಸ್ ಪೀಡಿತರ ಗಂಟಲು ದ್ರವ (ಸ್ವ್ಯಾಬ್)ದಿಂದ ಈ ವೈರಾಣು ಚಿತ್ರವನ್ನು ಸೆರೆಹಿಡಿಯಲಾಗಿದೆ. 

ಭಾರತಕ್ಕೆ ಆಗಮಿಸಿದ ಕೇರಳ ಮೂಲದ, ವುಹಾನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು.

ಕೋವಿಡ್-19 ರೋಗ ಸೃಷ್ಟಿಸುವ ವೈರಾಣು ಸಾರ್ಸ್-ಸಿಒವಿ-2 ವೈರಾಣುಗಳು  ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (ಮರ್ಸ್-ಕೋವಿ) ಮತ್ತು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‌ಎಆರ್ಎಸ್-ಕೋವಿ) ವೈರಾಣುಗಳನ್ನು ಹೋಲುತ್ತಿದೆ.

ಈ ವೈರಾಣುಗಳು ಪ್ರೊಟಿನ್ ರಿಸೆಪ್ಟರ್ ಗಳನ್ನು, ಶುಗರ್ ರಿಸೆಪ್ಟಾರ್ ಗಳೂ ಸೇರಿ ವಿವಿಧ ರಿಸೆಪ್ಟಾರ್ ಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಈ ಚಿತ್ರದಿಂದ ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com