ಕೋವಿಡ್-19: ಸಚಿವರ ಸಮಿತಿಯಿಂದ ದೇಶದಲ್ಲಿನ ಪರಿಸ್ಥಿತಿ ಪರಾಮರ್ಶೆ, ವಲಸೆ ಕಾರ್ಮಿಕರ ಬಗ್ಗೆ ಚರ್ಚೆ

ಕೊರೋನಾ ಸಾಂಕ್ರಾಮಿಕ ಕಾಯಿಲೆಗೆ  ತುತ್ತಾದವರಿಗೆ ಚಿಕಿತ್ಸೆ ಸೇರಿದಂತೆ ದೇಶಾದ್ಯಂತ  ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅತ್ಯಾವಶ್ಯಕ ವಸ್ತುಗಳ ಪೂರೈಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿನ ಸಚಿವರ ಸಮಿತಿಯಿಂದ ಇಂದು ಪರಾಮರ್ಶೆ ನಡೆಸಲಾಗಿದೆ
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ನವದೆಹಲಿ: ಕೊರೋನಾ ಸಾಂಕ್ರಾಮಿಕ ಕಾಯಿಲೆಗೆ  ತುತ್ತಾದವರಿಗೆ ಚಿಕಿತ್ಸೆ ಸೇರಿದಂತೆ ದೇಶಾದ್ಯಂತ  ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅತ್ಯಾವಶ್ಯಕ ವಸ್ತುಗಳ ಪೂರೈಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿನ ಸಚಿವರ ಸಮಿತಿಯಿಂದ ಇಂದು ಪರಾಮರ್ಶೆ ನಡೆಸಲಾಗಿದೆ

ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಾದ ನಂತರ ನಗರ ಪ್ರದೇಶಗಳಿಂದ ತಮ್ಮ ಸ್ವಗ್ರಾಮದತ್ತ ನೂರಾರು ಕಿಲೋ ಮೀಟರ್ ದೂರದವರೆಗೂ ನಡೆಯುತ್ತಾ ಸಾಗಿರುವ ವಲಸೆ ಕಾರ್ಮಿಕರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ

ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರಾದ ರಾಮ್ ವಿಲಾಸ್ ಪಾಸ್ವನ್, ಹರ್ದೀಪ್ ಸಿಂಗ್ ಪುರಿ, ನರೇಂದ್ರ ಸಿಂಗ್ ತೋಮರ್, ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವ್ಡೇಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಚಿವರಾದ ರಮೇಶ್ ಪೊಖ್ರಿಯಲ್ ನಿಶಾಂಕ್, ಸ್ಮೃತಿ ಇರಾನಿ, ಗಜೇಂದ್ರ ಸಿಂಗ್ ಶೇಖಾವತ್, ಜಿ, ಕಿಶಾನ್ ರೆಡ್ಡಿ, ಪಿಯೂಷ್ ಗೋಯೆಲ್ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದು ತಿಳಿದುಬಂದಿದೆ.

ಪೆಟ್ರೋಲ್ ಉತ್ಪನ್ನಗಳು ದೇಶಾದ್ಯಂತ ಸಮರ್ಪಕ ರೀತಿಯಲ್ಲಿ ಲಭ್ಯವಿದ್ದು, ಅತ್ಯಾವಶ್ಯಕ ವಸ್ತುಗಳಿಗೂ ಯಾವುದೇ ತೊಂದರೆಯಾಗಿಲ್ಲ, ಸ್ಥಳೀಯವಾಗಿ ಉದ್ಬವಿಸುವ ಯಾವುದೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com