ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪಿ.ಎಂ ಕೇರ್ಸ್ ಏಕೆ?: ಕೇಂದ್ರ ಸರ್ಕಾರಕ್ಕೆ ರಾಮಚಂದ್ರ ಗುಹಾ ಪ್ರಶ್ನೆ

ಕೊರೋನಾ ವಿರುದ್ಧ ಹೊರಾಟ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ತುರ್ತು ಸಂದರ್ಭಗಳಲ್ಲಿ ನಾಗರಿಕರ ಸಹಾಯ ಮತ್ತು ಪರಿಹಾರ (ಪಿಎಂ. ಕೇರ್ಸ್) ನಿಧಿಯನ್ನು ಹೊಸದಾಗಿ ಪ್ರಾರಂಭಿಸಿರುವುದನ್ನು ಇತಿಹಾಸಕಾರ ರಾಮಚಂದ್ರ ಗುಹಾ ಪ್ರಶ್ನಿಸಿದ್ದಾರೆ. 
ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪಿ.ಎಂ ಕೇರ್ಸ್ ಏಕೆ?: ಕೇಂದ್ರ ಸರ್ಕಾರಕ್ಕೆ ರಾಮಚಂದ್ರ ಗುಹಾ ಪ್ರಶ್ನೆ
ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪಿ.ಎಂ ಕೇರ್ಸ್ ಏಕೆ?: ಕೇಂದ್ರ ಸರ್ಕಾರಕ್ಕೆ ರಾಮಚಂದ್ರ ಗುಹಾ ಪ್ರಶ್ನೆ

ನವದೆಹಲಿ: ಕೊರೋನಾ ವಿರುದ್ಧ ಹೊರಾಟ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ತುರ್ತು ಸಂದರ್ಭಗಳಲ್ಲಿ ನಾಗರಿಕರ ಸಹಾಯ ಮತ್ತು ಪರಿಹಾರ (ಪಿಎಂ. ಕೇರ್ಸ್) ನಿಧಿಯನ್ನು ಹೊಸದಾಗಿ ಪ್ರಾರಂಭಿಸಿರುವುದನ್ನು ಇತಿಹಾಸಕಾರ ರಾಮಚಂದ್ರ ಗುಹಾ ಪ್ರಶ್ನಿಸಿದ್ದಾರೆ. 

ಟ್ವೀಟ್ ಮಾಡಿರುವ ರಾಮಚಂದ್ರ ಗುಹಾ, ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇರಬೇಕಾದರೆ,  ಪಿ.ಎಂ ಕೇರ್ಸ್ ನಿಧಿ ಸ್ಥಾಪನೆಯ ಅಗತ್ಯವೇನಿತ್ತು? ಎಂದು ಕೇಳಿದ್ದಾರೆ. 

ಹೊಸ ನಿಧಿಯನ್ನು ಸ್ಥಾಪಿಸಿ ಸಾರ್ವಜನಿಕರಿಂದ ಅದಕ್ಕೆ ದೇಣಿಗೆ ಕೇಳುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗುಹಾ, ಸ್ವಯಂ-ಅಧಿಕಾರದ ಹೆಸರನ್ನೇಕೆ ಹೊಸ ನಿಧಿಗೆ ಇಡಬೇಕಿತ್ತು? ರಾಷ್ಟ್ರೀಯ ವಿಪತ್ತಿನಲ್ಲೂ ಸಹ ವ್ಯಕ್ತಿತ್ವದ ಆರಾಧನೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕೆ? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. 

ಕೊರೋನಾ ವೈರಸ್ ವಿರುದ್ಧ ಹೋರಾಡುವುದಕ್ಕೆ ಮಾ.28 ಪ್ರಧಾನಿ ನರೇಂದ್ರ ಮೋದಿ ಪಿಎಂ ಕೇರ್ಸ್ ನ್ನು ಸ್ಥಾಪಿಸಿದ್ದರು. ಇದಕ್ಕೆ ಕಾಂಗ್ರೆಸ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದು, ರಾಮಚಂದ್ರ ಗುಹಾ ಅವರ ಪ್ರಶ್ನೆಗೆ ಧ್ವನಿಗೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com