ಸಿಮೆಂಟ್ ಮಿಕ್ಸಿಂಗ್ ಟ್ರಕ್ ಒಳಗೆ ಅವಿತು ಲಖನೌಗೆ ತೆರಳುತ್ತಿದ್ದ 18 ವಲಸೆ ಕಾರ್ಮಿಕರ ಬಂಧನ

ದೇಶಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಮನೆಗಳನ್ನು , ಊರುಗಳನ್ನು ತಲುಪಲು ಸಾಧ್ಯವಾಗದೆ ಹೋದ ಅನೇಕರು ಪರಿತಪಿಸುತ್ತಿದ್ದರೆ ಹತಾಶರಾಗಿದ್ದ ಕಾರ್ಮಿಕರ ಗುಂಪೊಂದು ಮಹಾರಾಷ್ಟ್ರದಿಂದ ಲಳನೌಗೆ ತೆರಳುತ್ತಿದ್ದ ದ್ದ ಸಿಮೆಂಟ್ ಮಿಕ್ಸರ್ ಟ್ರಕ್‌ ಮೂಲಕ ಪ್ರಯಾಣಿಸಲು ಯತ್ನಿಸಿದೆ.
ಸಿಮೆಂಟ್ ಮಿಕ್ಸಿಂಗ್ ಟ್ರಕ್ ಮೂಲಕ ಲಖನೌಗೆ ತೆರಳುತ್ತಿದ್ದ ವಲಸೆ ಕಾರ್ಮಿಕರು
ಸಿಮೆಂಟ್ ಮಿಕ್ಸಿಂಗ್ ಟ್ರಕ್ ಮೂಲಕ ಲಖನೌಗೆ ತೆರಳುತ್ತಿದ್ದ ವಲಸೆ ಕಾರ್ಮಿಕರು

ಇಂದೋರ್: ದೇಶಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಮನೆಗಳನ್ನು , ಊರುಗಳನ್ನು ತಲುಪಲು ಸಾಧ್ಯವಾಗದೆ ಹೋದ ಅನೇಕರು ಪರಿತಪಿಸುತ್ತಿದ್ದರೆ ಹತಾಶರಾಗಿದ್ದ ಕಾರ್ಮಿಕರ ಗುಂಪೊಂದು ಮಹಾರಾಷ್ಟ್ರದಿಂದ ಲಳನೌಗೆ ತೆರಳುತ್ತಿದ್ದ ದ್ದ ಸಿಮೆಂಟ್ ಮಿಕ್ಸರ್ ಟ್ರಕ್‌ ಮೂಲಕ ಪ್ರಯಾಣಿಸಲು ಯತ್ನಿಸಿದೆ.

ಹಾಗೆ ಅಕ್ರಮವಾಗಿ .ಟ್ರಕ್ ಒಳಗೆ ಪ್ರಯಾಣಿಸುತ್ತಿದ್ದ 18 ಜನರನ್ನು  ಇಂದೋರ್ ಪೋಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಅಲ್ಲದೆ ಪೊಲೀಸರು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

"ಅವರು ಮಹಾರಾಷ್ಟ್ರದಿಂದ ಲಖನೌಗೆ ಪ್ರಯಾಣಿಸುತ್ತಿದ್ದರು. ಟ್ರಕ್ ಅನ್ನು ಪೊಲೀಸ್ ಠಾಣೆಗೆ ತರಲಾಗಿದ್ದು ಎಫ್ಐಆರ್ ದಾಖಲಿಸಲಾಗಿದೆ". ಡಿಎಸ್ಪಿ ಉಮಕಾಂತ್ ಚೌಧರಿ ಹೇಳಿದ್ದಾರೆ.

ಘಟನೆಯ ವೀಡಿಯೊ ಮಾದ್ಯಮಗಳಲ್ಲಿ ಪ್ರಸಾರ ಕಾಣುತ್ತಿದ್ದು ಟ್ರಕ್ ಅನ್ನು ಪೋಲೀಸರು ತಡೆದ ನಂತರ ಮೆಂಟ್ ಮಿಕ್ಸರ್ ನ ದೊಡ್ಡ ರಂದ್ರದಿಂಡ ಒಬ್ಬೊಬ್ಬರೇ ಇಳಿದು ಬರುತ್ತಿರುವುದನ್ನು ನೋಡಬಹುದಾಗಿದೆ. ಇವರಲ್ಲಿ ಕೆಲಾವರು ಮಾಸ್ಕ್ ಧರಿಸಿದ್ದರೆ ಉಳಿದವರು ಟವೆಲ್ ಸುತ್ತಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com