ವಾರಣಾಸಿ: ಪತ್ರಕರ್ತೆ ರಿಜ್ವಾನಾ ತಬಸ್ಸುಮ್ ಆತ್ಮಹತ್ಯೆ, ಸಮಾಜವಾದಿ ಪಕ್ಷದ ಮುಖಂಡನ ಬಂಧನ

ಇಪ್ಪತ್ತೆಂಟು ವರ್ಷದ ಫ್ರೀಲ್ಯಾನ್ಸ್ ಪತ್ರಕರ್ತೆ ರಿಜ್ವಾನಾ ತಬಸ್ಸುಮ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ  ಸಮಾಜವಾದಿ ಪಕ್ಷದ ಮುಖಂಡ ಶಮೀಮ್ ನೊಮಾನಿ ಅವರನ್ನು ಈ ಸಂಬಂಧ ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾರಣಾಸಿ: ಇಪ್ಪತ್ತೆಂಟು ವರ್ಷದ ಫ್ರೀಲ್ಯಾನ್ಸ್ ಪತ್ರಕರ್ತೆ ರಿಜ್ವಾನಾ ತಬಸ್ಸುಮ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ  ಸಮಾಜವಾದಿ ಪಕ್ಷದ ಮುಖಂಡ ಶಮೀಮ್ ನೊಮಾನಿ ಅವರನ್ನು ಈ ಸಂಬಂಧ ಬಂಧಿಸಲಾಗಿದೆ.

ತನ್ನ ಸಾವಿಗೆ "ಶಮೀಮ್ ನೋಮಾನಿಯೇ ಕಾರಣ" ಎಂದು ಆಕೆಯ ಡೆತ್ ನೋಟ್ ತಿಳಿಸಿದೆ. ವಾರಣಾಸಿ ಜಿಲ್ಲೆಯ ಹರ್ಪಲ್ ಪುರದಲ್ಲಿ ಸೋಮವಾರ ರಿಜ್ವಾನಾ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಸ್‌ಎಸ್‌ಪಿಯ ಪಿಆರ್‌ಒ ಸಂಜಯ್ ತ್ರಿಪಾಠಿ ಅವರು ಶಮೀಮ್‌ರನ್ನುಬಂಧಿಸಲಾಗಿದೆ ಎಂದು ಮಂಗಳವಾರ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಸೋಮವಾರ ರಾತ್ರಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ರಿಜ್ವಾನಾ ಅವರ ಮರಣೋತ್ತರ ವರದಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ರಿಜ್ವಾನಾ ಅವರ ತಂದೆಯ ದೂರಿನ ಮೇರೆಗೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಲೋಹ್ತಾ ನಿವಾಸಿ ನೊಮಾನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾರಣಾಸಿ ಸದರ್ ಸಿಒ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ ರಿಜ್ವಾನಾ ಸೋಮವಾರ ತನ್ನ ಕೊಠಡಿಯಿಂದ ಹೊರಬರದಿದ್ದಾಗ ಶಮೀಮ್ ಆಕೆಯನ್ನು ಕರೆಯಲು ಹೋಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಶಮೀಮ್ ಮತ್ತು ರಿಜ್ವಾನಾ ಬಹಳ ಕಾಲ ಸ್ನೇಹಿತರಾಗಿದ್ದರು ಆದರೆ ಇದ್ದಕ್ಕಿದ್ದಂತೆ ಇವರ ಮಧ್ಯೆ ಏನು ನಡೆಇತ್ತು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. "ಅವಳು ಎಂದಿಗೂ ಯಾವುದರ ಬಗ್ಗೆಯೂ ಹೇಳಲಿಲ್ಲ ಅಥವಾ ಯಾರೊಂದಿಗೂ ದ್ವೇಷವನ್ನು ಹೊಂದಿರಲಿಲ್ಲ. ಅವಳು ಒಳ್ಳೆಯ ಮಗಳು ಮತ್ತು ಉತ್ತಮ ಪತ್ರಕರ್ತೆಯಾಗಿದ್ದಳು"  ಮೃತ ಪತ್ರಕರ್ತೆಯ ತಂದೆ ಹೇಳಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ ಪದವಿ ಪಡೆದಿದ್ದ ರಿಜ್ವಾನಾ  ಹಲವಾರು ಪೋರ್ಟಲ್‌ಗಳು ಮತ್ತುಪಬ್ಲಿಏಷನ್ಸ್ ಗಳಲ್ಲಿ ಫ್ರೀಲ್ಯಾನ್ಸ್ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com