ಲಾಕ್ ಡೌನ್ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಟನ್ ಬಟಾಣಿ ಉತ್ಪಾದನೆ

ಲಾಕ್ ಡೌನ್ ನ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಮೆಟ್ರಿಕ್ ಟನ್ ಬಟಾಣಿ ಉತ್ಪಾನೆಯಾಗಿದೆ. 
ಲಾಕ್ ಡೌನ್ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಟನ್ ಬಟಾಣಿ ಉತ್ಪಾನೆ
ಲಾಕ್ ಡೌನ್ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಟನ್ ಬಟಾಣಿ ಉತ್ಪಾನೆ

ಶಿಮ್ಲಾ: ಲಾಕ್ ಡೌನ್ ನ ನಡುವೆಯೂ ಹಿಮಾಚಲ ಪ್ರದೇಶದಲ್ಲಿ 4,000 ಮೆಟ್ರಿಕ್ ಟನ್ ಬಟಾಣಿ ಉತ್ಪಾನೆಯಾಗಿದೆ. 

ರಾಜ್ಯ ಸರ್ಕಾರಿ ಸ್ವಾಮ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಈ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 9.20 ಕೋಟಿ ರೂಪಾಯಿ ಮೌಲ್ಯದ 4,000 ಮೆಟ್ರಿಕ್ ಟನ್ ನಷ್ಟು ಬಟಾಣಿ ರಾಜ್ಯದ ಸೋಲನ್ ಜಿಲ್ಲೆಯಲ್ಲಿ ಉತ್ಪಾದನೆಯಾಗಿದೆ. 

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆ, ನೆರೆ ರಾಜ್ಯಗಳಾದ ಪಂಜಾಬ್, ಹರ್ಯಾಣ, ಚಂಡೀಘರ್, ನವದೆಹಲಿಯಲ್ಲಿ ಹೆಚ್ಚು ಬೇಡಿಕೆ ಇರುವ ಅಕಾಲಿಕ ತರಕಾರಿಗಳಾದ ಕ್ಯಾಪ್ಸಿಕಂ, ಹಸಿರು ಬಟಾಣಿ, ಬೀನ್ಸ್, ಎಲೆಕೋಸು, ಹೂಕೋಸು, ಆಲೂಗಡ್ಡೆ ಮತ್ತು ಸೌತೆಕಾಯಿಯನ್ನು ಬೆಳೆಯುವುದಕ್ಕೆ ಹೆಸರುವಾಸಿಯಾಗಿದೆ. 

ಮಾ.24 ರಂದು ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆಯಾದಾಗಿನಿಂದ ಹಿಮಾಚಲ ಪ್ರದೇಶದ ಸರ್ಕಾರ ರೈತರಿಗೆ ಮಾರುಕಟ್ಟೆ ತಲುಪುವುದಕ್ಕೆ ಹಾಗೂ ನಿರ್ದಿಷ್ಟ ಬೆಳೆಗಳನ್ನು ಬೆಳೆಯುವುದಕ್ಕೆ ಕ್ರಮಗಳನ್ನು ಕೈಗೊಂಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com