ತ್ರಿಪುರಾ: ಮತ್ತೆ 24 ಬಿಎಸ್ಎಫ್ ಸಿಬ್ಬಂದಿಗಳಿಗೆ ಕೊರೋನಾ, ಒಟ್ಟು ಪ್ರಕರಣ ಸಂಖ್ಯೆ 88ಕ್ಕೆ ಏರಿಕೆ

ತ್ರಿಪುರದಲ್ಲಿ ಗುರುವಾರ 24 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗಳಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು ರಾಜ್ಯದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳು 88 ಕ್ಕೆ ತಲುಪಿವೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಿಳಿಸಿದ್ದಾರೆ.
ಬಿಎಸ್ಎಫ್ ಸಿಬ್ಬಂದಿ
ಬಿಎಸ್ಎಫ್ ಸಿಬ್ಬಂದಿ

ಅಗರ್ತಲಾ: ತ್ರಿಪುರದಲ್ಲಿ ಗುರುವಾರ 24 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗಳಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು ರಾಜ್ಯದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳು 88 ಕ್ಕೆ ತಲುಪಿವೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಿಳಿಸಿದ್ದಾರೆ.

ಎಲ್ಲಾ ಹೊಸ ಪ್ರಕರಣಗಳು ಧಲೈ ಜಿಲ್ಲೆಯ ಅಂಬಾಸ್ಸಾದಲ್ಲಿರುವ ಬಿಎಸ್ಎಫ್ ನ 86 ನೇ ಬೆಟಾಲಿಯನ್ ಪ್ರಧಾನ ಕಚೇರಿಯಲ್ಲಿ ವರದಿಯಾಗಿದೆ ಎಂದು ಅವರು ಹೇಳಿದರು.

86 ನೇ-ಬಿಎನ್ ಬಿಎಸ್ಎಫ್ ಬೆಟಾಲಿಯನ್ ಅಂಬಾಸ್ಸಾದ 24 ಯೋಧರು ಕೋವಿಡ್ ಸೋಂಕಿಗೆ ಒಳಗಾಗಿರುವುದು ಸಾಬೀತಾಗಿದೆ.  ತ್ರಿಪುರಾದಲ್ಲಿ ಇದೀಗ 88 ಕೋವಿಡ್ 19 ರೋಗಿಗಳು ಇದ್ದಾರೆ ಇದರಲ್ಲಿ ಇಬ್ಬರು ಗುಣಮುಖರಾಗಿದ್ದು 86 ಪ್ರಕ್ರಣಗಳು ಸಕ್ರಿಯವಾಗಿದೆ. ಆದರೆ ಇವೆಲ್ಲವೂ ಸೈನ್ಯದ ಸಿಬ್ಬಂದಿಗಳೇ ಆಗಿದೆ ಹೊರತು ನಾಗರಿಕರಲ್ಲಿ ಯಾವ ಕೋವಿಡ್ ಸೋಂಕು ಪತ್ತೆಯಾಗಿಲ್ಲ. 

ಏತನ್ಮಧ್ಯೆ, ತ್ರಿಪುರದ ಸಹಾಯಕ ಸಿಎಸ್ ಎಸ್.ಕೆ.ರಾಕೇಶ್  ಹೇಳಿದಂತೆ  "138 ಬೆಟಾಲಿಯನ್ ಬಿಎಸ್ಎಫ್ ಅಂಬಾಸ್ಸಾದಿಂದ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ 22 ಕೋವಿಡ್  -19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. 138 ಬೆಟಾಲಿಯನ್ ನ ಎಲ್ಲಾ 298 ಬಿಎಸ್ಎಫ್ ಸಿಬ್ಬಂದಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಬಿಎಸ್ಎಫ್ ನ ಕ್ಯಾಂಪಸ್ ನಲ್ಲಿ ಅಂಬಾಸ್ಸಾ ಮತ್ತು ಇತರ ಶಿಬಿರಗಳಲ್ಲಿ ರುವ  ಎರಡೂ ಬೆಟಾಲಿಯನ್ ಗಳಿಂದ ಬಿಎಸ್ಎಫ್ ಗೆ ಸೇರಿದ 673  ಮಂದಿಯ ಮಾದರಿಗಳನ್ನು  ಪರೀಕ್ಷಿಸಲಾಗುತ್ತಿದೆ. " ಕೋವಿಡ್ ಸೋಂಕಿತರೊಡನೆ ವಹರಿಸಲು ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸೇರಿದಂತೆ 30 ಜನರಿಗೆ ವಿಶೇಷವಾಗಿ ತರಬೇತಿ ನೀಡಲಾಗುತ್ತಿದೆ "

ಇನ್ನು ಹಂದಿ ಜ್ವರದಿಂದಾಗಿ ರಾಜ್ಯದಲ್ಲಿ ಹಂದಿಮಾಂಸವನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಅಧಿಕೃತ ಎಚ್ಚರಿಕೆಯನ್ನು ಬಿಡುಗಡೆ ಮಾಡಿಲ್ಲ. ತ್ರಿಪುರಾ ನೆರೆರಾಜ್ಯ ಅಸ್ಸಾಂನಲ್ಲಿ ಹಂದಿ ಜ್ವರದ ಪರಿಣಾಮ ನೂರಾರು ಹಂದಿಗಳು ಸಾವನ್ನಪ್ಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com