ಧಾರ್ಮಿಕ ಭಾವನೆಗೆ ಧಕ್ಕೆ: ಕೇರಳ ಪೊಲೀಸರಿಂದ ಜೀ ನ್ಯೂಸ್ ಪ್ರಧಾನ ಸಂಪಾದಕನ ವಿರುದ್ಧ ಕೇಸ್

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಜೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Published: 08th May 2020 09:07 PM  |   Last Updated: 08th May 2020 10:47 PM   |  A+A-


SUDHIR1

ಸುಧೀರ್ ಚೌಧರಿ

Posted By : Lingaraj Badiger
Source : The New Indian Express

ಕೋಝಿಕೊಡ್: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಜೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕಳೆದ ಮಾರ್ಚ್ 11ರಂದು ಪ್ರಸಾರವಾದ ಡಿಎನ್ಎ ಎಂಬ ಕಾರ್ಯದಲ್ಲಿ ಜಿಹಾದ್ ಬಗ್ಗೆ ಚರ್ಚಿಸುವ ಮೂಲಕ ಮುಸ್ಲಿಮರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ ಎಂದದು ಆರೋಪಿಸಿ ಪಿ ಗವಾಸ್ ಎಂಬುವವರು ನೀಡಿದ ದೂರಿನ ಆಧಾರ ಮೇಲೆ ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 259ಎ ಅಡಿ ಕಸಬ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ನಾನು ಆಕಸ್ಮಿಕವಾಗಿ ಡಿಎನ್ಎ ಕಾರ್ಯಕ್ರಮವನ್ನು ನೋಡಿದೆ. ಅದರಲ್ಲಿ ತೋರಿಸಿರುವ ರೇಖಾಚಿತ್ರವನ್ನು ಜಿಹಾದ್ ಪ್ರಕಾರಗಳನ್ನು ಆಕ್ರಮಣಕಾರಿ ವಿಷಯವೆಂದು ವಿವರಿಸಲಾಗಿದೆ. ಅದು ಮುಸ್ಲಿಂ ಜನಸಂಖ್ಯೆಗೆ ವಿರುದ್ಧವಾಗಿದೆ ಎಂದು ಗವಾಸ್ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp