ಡೂಡಲ್ ಮೂಲಕ ಅಮ್ಮಂದಿರ ದಿನಕ್ಕೆ ಗೌರವ: ಗೂಗಲ್ ನಲ್ಲಿ ಕ್ರಾಫ್ಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ

ಗೂಗಲ್ ಡೂಡಲ್
ಗೂಗಲ್ ಡೂಡಲ್

ನವದೆಹಲಿ: ತಾಯಂದಿರು ತೋರಿಸುವ ಪ್ರೀತಿ, ಕಾಳಜಿಗೆ ಸಂಕೇತವಾಗಿ ವಿಶ್ವ ಅಮ್ಮಂದಿರ ದಿನವನ್ನು ಆಚರಿಸುತ್ತಿದ್ದರೆ ಗೂಗಲ್ ಡೂಡಲ್ ಮೂಲಕ 2020ನೇ ಸಾಲಿನ ಅಮ್ಮಂದಿರ ದಿನಕ್ಕೆ ಗೌರವ ತೋರಿಸಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಡುವೆ ಗೂಗಲ್ ಡೂಡಲ್ ನೀವು ನಿಮ್ಮ ಅಮ್ಮಂದಿರ ಬಗ್ಗೆ ತೋರಿಸುತ್ತಿರುವ ಪ್ರೀತಿ, ಕಾಳಜಿಯನ್ನು ವರ್ಚುವಲ್ ಕಾರ್ಡು, ಗ್ರೀಟಿಂಗ್ಸ್ ತಯಾರಿಸಿ ಹಂಚಿಕೊಳ್ಳಿ ಎಂದಿದೆ.

ಹ್ಯಾಪಿ ಮದರ್ಸ್ ಡೇ, ಇಂದಿನ ಗೂಗಲ್ ಡೂಡಲ್ ಮೂಲಕ ನಿಮ್ಮ ಹೃದಯಾಂತರಾಳದಿಂದ ಕಲೆ ಮತ್ತು ಕಸೂತಿ ತಯಾರಿಸಿ ಹಂಚಿಕೊಳ್ಳಿ ಎಂದಿದೆ. ಗೂಗಲ್ ಕ್ಲಿಕ್ ಮಾಡಿದರೆ, ಅದರಲ್ಲಿ ಗೂಗಲ್ ಲೆಟರ್ ಎಂದು ತೋರಿಸುತ್ತದೆ. ಅಲ್ಲಿ ಕಾರ್ಡು ತಯಾರಿಸಲು ಆಯ್ಕೆ ಕೊಟ್ಟಿರುತ್ತಾರೆ. ಅಲ್ಲಿ ವಿನ್ಯಾಸ(ಡಿಸೈನ್)ಕ್ಕೆ ಕ್ಲಿಕ್ ಮಾಡಿ ಖಾಲಿ ಕಾರ್ಡನ್ನು ಇರಿಸಬಹುದು.

ಅಲ್ಲಿ ವಿವಿಧ ವಿನ್ಯಾಸದ ಕ್ರಾಫ್ಟ್ ಐಕಾನ್ ಸಿಗುತ್ತದೆ. ಕಾರ್ಡು ಪೂರ್ಣಗೊಂಡ ನಂತರ ಸೆಂಡ್ ಕಳುಹಿಸುವ ಆಯ್ಕೆ ಬರುತ್ತದೆ. ಅಲ್ಲಿ ನಿಮ್ಮ ತಾಯಂದಿರ ಫೋಟೋದೊಂದಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಬಹುದು.

ಅಮೆರಿಕದಲ್ಲಿ 20ನೇ ಶತಮಾನದ ಆರಂಭ ಭಾಗದಲ್ಲಿ ಅನ್ನಾ ಜರ್ವಿಸ್ ಅವರಿಂದ ಅಮ್ಮಂದಿರ ದಿನ ಆಚರಣೆ ಪ್ರಾರಂಭವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com