ತಾನೇ ಕಂಡುಹಿಡಿದ ಔಷಧಿ ಸೇವಿಸಿ ಕಂಪನಿಯ ಜಿಎಂ ಸಾವು, 3 ದಿನದ ಬಳಿಕ ಬಂತು ಕೊರೋನಾ ಪಾಸಿಟಿವ್

ಕೊರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಲಲು ಅಭಿವೃದ್ಧಿಪಡಿಸಿದ ಔಷಧಿಯನ್ನು ಸೇವಿಸಿ ಚೆನ್ನೈ ಮೂಲದ ಗಿಡ ಮೂಲಿಕೆ ಉತ್ಪನ್ನಗಳ ಕಂಪನಿಯ ಜನರಲ್ ಮ್ಯಾನೇಜರ್ ಓರ್ವ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕು ಕಂಡಿದೆ. ಮಾತ್ರವಲ್ಲದೆ ಆಘಾತಕಾರಿ ಬೆಳವಣಿಗೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ ಮೂರು ದಿನಗಳ ನಂತರ ಆತನಿಗೆ ಕೊರೋನಾವೈರಸ್ ಇರುವುದು ದೃಢವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಕೊರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಲಲು ಅಭಿವೃದ್ಧಿಪಡಿಸಿದ ಔಷಧಿಯನ್ನು ಸೇವಿಸಿ ಚೆನ್ನೈ ಮೂಲದ ಗಿಡ ಮೂಲಿಕೆ ಉತ್ಪನ್ನಗಳ ಕಂಪನಿಯ ಜನರಲ್ ಮ್ಯಾನೇಜರ್ ಓರ್ವ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕು ಕಂಡಿದೆ. ಅಷ್ಟು ಮಾತ್ರವಲ್ಲದೆ ಆಘಾತಕಾರಿ ಬೆಳವಣಿಗೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ ಮೂರು ದಿನಗಳ ನಂತರ ಆತನಿಗೆ ಕೊರೋನಾವೈರಸ್ ಇರುವುದು ದೃಢವಾಗಿದೆ.

ಭಾನುವಾರ ಕೋವಿಡ್ ಪರೀಕ್ಷಾ  ವರದಿ ಬಂದಿದ್ದು ನಂತರ ಕೋವಿಡ್  ಸಂತ್ರಸ್ತರ ಪ್ರೋಟೋಕಾಲ್ ಪ್ರಕಾರ ಶವವನ್ನು ಅಂತ್ಯಸಂಸ್ಕಾರ  ಮಾಡಲಾಗಿದೆ. ಅವರ ಶವವನ್ನು ಆಸ್ಪತ್ರೆಗೆ ಕೊಂಡೊಯ್ದ ಪೊಲೀಸ್ ಸಿಬ್ಬಂದಿಯನ್ನು ಸಹ ಕೊರೋನಾ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

ಜನಪ್ರಿಯ ಗಿಡ ಮೂಲಿಕೆ ಉತ್ಪನ್ನಗಳಾದ ನಿವಾರಣ್ 90, ವೆಲ್ವೆಟ್ ಶಾಂಪೂ ಮತ್ತು ಮೆಮೊರಿ ಪ್ಲಸ್ ತಯಾರಿಸುವ ಸುಜಾತಾ ಬಯೋ-ಟೆಕ್ನ ಪ್ರಧಾನ ವ್ಯವಸ್ಥಾಪಕ ಇದೀಗ ಕೊರೋನಾದಿಂದ ಸಾವಿಗೀಡಾಗಿದ್ದಾರೆ.  ಶಿವನೇಸನ್ (47) ಮೃತ ವ್ಯಕ್ತಿಯಾಗಿದ್ದು ಅವರು ಕೊರೋನಾವೈರಸ್ ನಿಂಡ ಗುಣಮುಖರಾಗಲು ಔಷಧಿ ತಯಾರಿಕೆಯ ಉದ್ದೇಶದೊಡನೆ ತಾವೇ ತಯಾರಿಸಿದ್ದ ವಿಶೇಷ ರಾಸಾಯನಿಕ ಸಂಯುಕ್ತವನ್ನು ಸೇವಿಸಿ ನಿಧನವಾಗಿದ್ದಾರೆ.

ಶಿವನೇಶನ್ ಅವರು ತೇನಾಂಪೆಟ್‌ನಲ್ಲಿರುವ ಕಂಪನಿಯ ಮಾಲೀಕ ಡಾ.ರಾಜ್ ಕುಮಾರ್ ಅವರ ಮನೆಯಲ್ಲಿ ತಂಗಿದ್ದರು.ಕೊರೋನಾಗೆ ಔಷಧಿ ಕಂಡುಕೊಳ್ಳಲು ಈ ಇಬ್ಬರೂ ಹೆಚ್ಚು ಉತ್ಸುಕರಾಗಿದ್ದರು, ಎಂದು ಕಂಪನಿಯ ಅಧಿಕಾರಿಯೊಬ್ಬರು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು. ಇವರು ಸೋಡಿಯಂ ನೈಟ್ರೇಟ್ ಅನ್ನು ಒಳಗೊಂಡಿರುವ ರಾಸಾಯನಿಕವನ್ನು  ಸೇವಿಸಿದ್ದಾಗಿ ಪೋಲೀಸರು ಹೇಳಿದ್ದಾರೆ. ವನೇಸನ್ ಆಸ್ಪತ್ರೆಗೆ ಹೋಗುವಮಾರ್ಗದ ನಡುವೆ ಸಾವನ್ನಪ್ಪಿದ್ದಾರೆ. ಭಾನುವಾರ ಕೋವಿಡ್ ಪರೀಕ್ಷೆ ವರದಿ ಬಂದ ನಂತರವೇ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿರುವ ತನಿಖಾಧಿಕಾರೊಗಳು  ಕಂಪನಿಯ ಮಾಲೀಕ ಡಾ.ರಾಜ್ ಕುಮಾರ್ ಅವರ ಮಾದರಿಗಳನ್ನು ಸಹ ತೆಗೆದುಕೊಂಡು ಪರೀಕ್ಷೆಗೆ ಕಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com