ಆಂಫಾನ್ ಚಂಡಮಾರುತ ತೀವ್ರವಾಗಿದ್ದು ಬಹುದೊಡ್ಡ ಪ್ರಮಾಣದಲ್ಲಿ ಹಾನಿ ಉಂಟುಮಾಡಬಹುದು: ಹವಾಮಾನ ಇಲಾಖೆ

ಆಂಫಾನ್ ಚಂಡಮಾರುತದ ಅಬ್ಬರ ತೀವ್ರವಾಗಿದ್ದು ಇದರಿಂದ ಬಹುದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಎಂ ಮೊಹಪಾತ್ರಾ ಎಚ್ಚರಿಕೆ ನೀಡಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಆಂಫಾನ್ ಚಂಡಮಾರುತದ ಅಬ್ಬರ ತೀವ್ರವಾಗಿದ್ದು ಇದರಿಂದ ಬಹುದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಎಂ ಮೊಹಪಾತ್ರಾ ಎಚ್ಚರಿಕೆ ನೀಡಿದ್ದಾರೆ.

ಆಂಫಾನ್ ತೀವ್ರತೆ ಸೂಪರ್ ಚಂಡಮಾರುತ ಆಗಿ ಪರಿವರ್ತಿತವಾಗಿದ್ದು ನಾಳೆಯ ಹೊತ್ತಿಗೆ ಪಶ್ಚಿಮ ಬಂಗಾಳದ ದಿಗ್ಹಾ ದ್ವೀಪದಲ್ಲಿ ಮತ್ತು ಬಾಂಗ್ಲಾದೇಶದ ಹಟಿಯಾ ದ್ವೀಪದಲ್ಲಿ ಇಳಿಯಲಿದೆ ಎಂದು ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆಂಫಾನ್ ಚಂಡಮಾರುತದ ಅಬ್ಬರ ತೀವ್ರವಾಗಿದೆ. ಇದು ಬಹುದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆಯಿದೆ ಎಂದು ಹೇಳಿದರು. ನಾಳೆ ಚಂಡಮಾರುತ ಇಳಿಕೆಯಾಗುವ ಸಂದರ್ಭದಲ್ಲಿ ಅದರ ತೀವ್ರತೆ ಗಂಟೆಗೆ 165 ಕಿಲೋ ಮೀಟರ್ ನಿಂದ 195 ಕಿಲೋ ಮೀಟರ್ ವರೆಗೆ ಇರಲಿದೆ. ಉತ್ತರ-ಈಶಾನ್ಯ ದಿಕ್ಕಿನಲ್ಲಿ ವಾಯುವ್ಯ ಬಂಗಾಳಕೊಲ್ಲಿ ಮತ್ತು ಪಶ್ಚಿಮ ಬಂಗಾಳವನ್ನು ದಾಟಿ, ನಾಳೆ ಮಧ್ಯಾಹ್ನದಿಂದ ಸಂಜೆಯ ಹೊತ್ತಿನಲ್ಲಿ ಸುಂದರ್‌ಬನ್ಸ್‌ಗೆ ಹತ್ತಿರವಿರುವ ದಿಘಾ (ಪಶ್ಚಿಮ ಬಂಗಾಳ) ಮತ್ತು ಹತಿಯಾ ದ್ವೀಪಗಳು (ಬಾಂಗ್ಲಾದೇಶ) ನಡುವಿನ ತೀರಗಳಲ್ಲಿ ಚಂಡಮಾರುತ ಅಬ್ಬರ ತೀವ್ರವಾಗಲಿದೆ ಎಂದು ವಿವರಿಸಿದರು.

ಇಂದು ಮತ್ತು ನಾಳೆ ಪಶ್ಚಿಮ ಬಂಗಾಳದ ತೀರದ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಪೂರ್ವ ಮೇದಿನೀಪುರ್, ದಕ್ಷಿಣ ಮತ್ತು ಉತ್ತರ 24 ಪರ್ಗಾನ್ಸ್, ಹೌರಾ, ಹೂಗ್ಲಿ, ಕೋಲ್ಕತ್ತಾಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಡಿಶಾ, ಬದ್ರಕ್, ಬಲಸೊರೆ, ಮಾಯೂರ್ ಬಂಜ್, ಜೈಪುರ್, ಕೇಂದ್ರಾಪರ ಮತ್ತು ಕಿಯೊಂಜ್ಹರ್ ಜಿಲ್ಲೆಗಳಲ್ಲಿ ನಾಳೆ ಭಾರೀ ಪ್ರಮಾಣದಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com