ಪಶ್ಚಿಮ ಬಂಗಾಳದಲ್ಲಿ ಜನಾಂಗೀಯ ನಿಂದನೆ ನಂತರ ಮಣಿಪುರಕ್ಕೆ ಮರಳಿದ ನೂರಾರು ನರ್ಸ್ ಗಳು

ಕೋಲ್ಕತಾದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಮಣಿಪುರದ ನೂರಾರು ನರ್ಸ್ ಗಳು ಜನಾಂಗೀಯ ನಿಂದನೆಗೆ ಒಳಗಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿರುವ ನಾಚಿಕೆಗೇಡಿನ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಣಿಪುರದ ನರ್ಸ್
ಮಣಿಪುರದ ನರ್ಸ್

ಕೋಲ್ಕತಾ: ಕೋಲ್ಕತಾದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಮಣಿಪುರದ ನೂರಾರು ನರ್ಸ್ ಗಳು ಜನಾಂಗೀಯ ನಿಂದನೆಗೆ ಒಳಗಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿರುವ ನಾಚಿಕೆಗೇಡಿನ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತಾದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು185 ನರ್ಸ್ ಗಳು ಕಿರುಕುಳ ಮತ್ತು ನಿಂದನೆಯಿಂದ ಬೇಸತ್ತು ತಮ್ಮ ಕೆಲಸಕ್ಕೆ ರಾಜೀನಾಮೆ ಇಂಫಾಲ್ ಗೆ ಮರಳಿದ್ದಾರೆ.

"ನಾವು ನಮ್ಮ ಕರ್ತವ್ಯಗಳನ್ನು ತೊರೆದಿದ್ದಕ್ಕೆ ನಮಗೆ ಬೇಸರವಾಗಿದೆ, ಆದರೆ ನಾವು ತಾರತಮ್ಯ, ಜನಾಂಗೀಯ ನಿಂದನೆಯನ್ನು ಎದುರಿಸಿದ್ದೇವೆ ಮತ್ತು ಜನರು ಕೆಲವೊಮ್ಮೆ ನಮ್ಮ ಮೇಲೆ ಉಗುಳುತ್ತಾರೆ. ಪಿಪಿಇ ಕಿಟ್‌ಗಳ ಕೊರತೆಯೂ ಇತ್ತು. ನಾವು ಹೋದಲ್ಲೆಲ್ಲಾ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದರು" ಕ್ರಿಸ್ಟೆಲ್ಲಾ ಎಂಬ ನರ್ಸ್ ಹೇಳಿದ್ದಾರೆ.

ಅಸ್ಸಾಂನಲ್ಲಿ, ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ವೊಬ್ಬರು, ತಮ್ಮನ್ನು 'ಕೊರೋನಾ ವೈರಸ್' ಎಂದು ಜನ ಕರೆಯುತ್ತಾರೆ ಎಂದು ಆರೋಪಿಸಿದ್ದಾರೆ.

ಚೀನಾ ಮೂಲದ ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದಂತೆ ಪ್ರಪಂಚದಾದ್ಯಂತ ಏಷ್ಯನ್ನರು ಜನಾಂಗೀಯ ನಿಂದನೆ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com