ದೆಹಲಿ ಏಮ್ಸ್ ಆಸ್ಪತ್ರೆ (ಸಂಗ್ರಹ ಚಿತ್ರ)
ದೆಹಲಿ ಏಮ್ಸ್ ಆಸ್ಪತ್ರೆ (ಸಂಗ್ರಹ ಚಿತ್ರ)

ದೆಹಲಿ ಏಮ್ಸ್ ಆಸ್ಪತ್ರೆಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾದಿಂದ ಸಾವು

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ರೆಸಿಡೆಂಟ್ ವೈದ್ಯರ ಸಂಘ(ಆರ್ ಡಿಎ) ತಿಳಿಸಿದೆ.

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ರೆಸಿಡೆಂಟ್ ವೈದ್ಯರ ಸಂಘ(ಆರ್ ಡಿಎ) ತಿಳಿಸಿದೆ.

ಹಾಸ್ಟೆಲ್ ನಿರ್ವಹಣೆ ಮಾಡುವವರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಆರ್‌ಡಿಎ ಆರೋಪಿಸಿದೆ.

ಈ ಸಂಬಂಧ ಏರ್ಮ್ಸ್ ನಿರ್ದೇಶಕರಿಗೆ ಆರ್ ಡಿಎ ಪತ್ರ ಬರೆದಿದ್ದು, ಒಂದು ತಿಂಗಳ ಹಿಂದೆಯೇ ಕೊವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಹಾಸ್ಟೆಲ್ ವಿಭಾಗ ನಿರಾಕರಿಸಿದೆ ಎಂದು ದೂರಿದೆ.

ಹಾಸ್ಟೆಲ್ ಸೂಪರಿಡೆಂಟ್ ಈ ಸಾವನ್ನು ಹೃದಯ ಸಂಬಂಧಿ ಘಟನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ವೈದ್ಯರ ಸಂಘ ಆರೋಪಿಸಿದೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಸೂಪರಿಡೆಂಟ್ ಮತ್ತು ಹಿರಿಯ ವಾರ್ಡನ್ ರಾಜೀನಾಮೆ ನೀಡುವಂತೆ ವೈದ್ಯರ ಸಂಘ ಒತ್ತಾಯಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com