ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿಗೆ ದೆಹಲಿಗೆ ಹೋಗಿದ್ದ ವಿದ್ಯಾರ್ಥಿಗೆ ಸೋಂಕು: ಸಿಕ್ಕಿಂಗೂ ವ್ಯಾಪಿಸಿದ ಕೋವಿಡ್-19

ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿಗಾಗಿ ದೆಹಲಿಗೆ ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್-19 ಸೋಂಕು ತಗುಲುವುದರೊಂದಿಗೆ ಸಿಕ್ಕಿಂನಲ್ಲಿ ಮೊದಲ ಕೊರೋನಾವೈರಸ್ ಪ್ರಕರಣ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ಯಾಂಗ್‍ಟಕ್‍ :ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿಗಾಗಿ ದೆಹಲಿಗೆ ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್-19 ಸೋಂಕು ತಗುಲುವುದರೊಂದಿಗೆ ಸಿಕ್ಕಿಂನಲ್ಲಿ ಮೊದಲ ಕೊರೋನಾವೈರಸ್ ಪ್ರಕರಣ ದೃಢಪಟ್ಟಿದೆ.

ಇತ್ತೀಚಿಗೆ ದೆಹಲಿಯಿಂದ ವಾಪಸ್ಸಾಗಿದ್ದ ಈ ವಿದ್ಯಾರ್ಥಿಯನ್ನು  ದಕ್ಷಿಣ ಸಿಕ್ಕಿಂನ ರಬೊಂಗ್ಲಾದಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಕೊರೋನಾವೈರಸ್ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಉತ್ತರ ಬೆಂಗಾಳ್ ಮೆಡಿಕಲ್ ಕಾಲೇಜ್ ಮತ್ತು ಸಿಲಿಗುರಿಯ ಆಸ್ಪತ್ರೆಗೆ ಕಳುಹಿಸಲಾಗಿತ್ತು.ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ  ಮಹಾನಿರ್ದೇಶಕ ಪೆಂಪಾ ತ್ಸೆರಿಂಗ್ ಭೂಟಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಸದ್ಯ ಈ ವಿದ್ಯಾರ್ಥಿ ಸರ್  ಥುಟೋಬ್ ನಮ್ಗ್ಯಾಲ್ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಭೂಟಿಯಾ ಹೇಳಿದ್ದಾರೆ.
ರಾಜ್ಯದಲ್ಲಿ ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ. ಊರಿಗೆ ವಾಪಸ್ಸಾಗುವ ಮಾರ್ಗದಲ್ಲಿ 25 ವರ್ಷದ ಈ ವಿದ್ಯಾರ್ಥಿ ಚಾಲಕ ಸೇರಿದಂತೆ 11 ಮಂದಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com