ಬಿಸಿಹವೆ: ಉತ್ತರ ಭಾರತಕ್ಕೆ ಐಎಂಡಿಯಿಂದ ರೆಡ್ ಅಲರ್ಟ್!

ಕೊರೋನಾ ಭೀತಿಯ ನಡುವೆಯೇ ಉತ್ತರ ಭಾರತೀಯರಿಗೆ ಬಿಸಿ ಹವೆ ಮತ್ತೊಂದು ಸವಾಲಾಗಿ ಪರಿಣಮಿಸಲಿದೆ. 
ಬಿಸಿಹವೆ: ಉತ್ತರ ಭಾರತಕ್ಕೆ ಐಎಂಡಿಯಿಂದ ರೆಡ್ ಅಲರ್ಟ್!

ನವದೆಹಲಿ: ಕೊರೋನಾ ಭೀತಿಯ ನಡುವೆಯೇ ಉತ್ತರ ಭಾರತೀಯರಿಗೆ ಬಿಸಿ ಹವೆ ಮತ್ತೊಂದು ಸವಾಲಾಗಿ ಪರಿಣಮಿಸಲಿದೆ. 

ಉತ್ತರ ಭಾರತದ ಹಲವೆಡೆ ತಾಪಮಾನ 45 ಡಿಗ್ರಿ ತಲುಪಿದ್ದು, ಹವಾಮಾನ ಇಲಾಖೆ ದೆಹಲಿ, ಪಂಜಾಬ್, ಹರ್ಯಾಣ, ಚಂಡೀಗಢ, ರಾಜಸ್ಥಾನಗಳಲ್ಲಿ ಬಿಸಿ ಹವೆಯ ಕಾರಣ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ.  

ಮುಂದಿನ ಎರಡು ದಿನಗಳಲ್ಲಿ ಭಾರತದ ಕೆಲವು ಭಾಗಗಳಲ್ಲಿ ಹವಾಮಾನ 47 ಡಿಗ್ರಿಗೆ ತಲುಪಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥರಾದ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com