ಮೇ 28ರ ನಂತರ ಬಿಸಿಗಾಳಿ ತಗ್ಗುವ ಸಾಧ್ಯತೆ: ಮೇ 29ಕ್ಕೆ ಧೂಳು, ಗುಡುಗು ಸಹಿತ ಮಳೆ ನಿರೀಕ್ಷಿತ- ಐಎಂಡಿ

ಮೇ 29 ಮತ್ತು 30ರಂದು ಉತ್ತರ ಭಾರತದಲ್ಲಿ ತೀವ್ರ ಮಟ್ಟದ ಬಿಸಿ ಗಾಳಿ ತಗ್ಗಲಿದ್ದು, ಅನೇಕ ಕಡೆಗಳಲ್ಲಿ ಧೂಳು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೇ 29 ಮತ್ತು 30ರಂದು ಉತ್ತರ ಭಾರತದಲ್ಲಿ ತೀವ್ರ ಮಟ್ಟದ ಬಿಸಿ ಗಾಳಿ ತಗ್ಗಲಿದ್ದು, ಅನೇಕ ಕಡೆಗಳಲ್ಲಿ ಧೂಳು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ.

ದೆಹಲಿ, ರಾಜಸ್ಥಾನ, ಹರ್ಯಾಣ, ಪಂಜಾಬ್, ಮತ್ತು ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಕೆಲವು ದಿನಗಳಿಂದ  45 ಡಿಗ್ರಿ ಸೆಲ್ಸಿಯಸ್ ನಷ್ಟ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜನತೆ ಬಿಸಿ ಗಾಳಿಯಿಂದ ಹೈರಾಣಗಿದ್ದಾರೆ.

ಮೇ 25 ಮತ್ತು 26ರಂದು ಬಿಸಿ ಗಾಳಿ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಉತ್ತರ ಭಾರತಕ್ಕೆ  ಹಳದಿ ಬಣ್ಣದ ಸಂಕೇತದ ಎಚ್ಚರಿಕೆ ನೀಡಿದೆ.

ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬೀಸುವ ಗಾಳಿಯ ಅಡಚಣೆಯಿಂದಾಗಿ ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಮೇ 29 ಮತ್ತು 30 ರಂದು ಧೂಳು , ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಇಲಾಖೆ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ. 

ಈ ಅವಧಿಯಲ್ಲಿ ಗಾಳಿ ಗಂಟೆಗೆ 50ರಿಂದ 60 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಇದರಿಂದಾಗಿ ಬಿಸಿಗಾಳಿಯಿಂದಾಗಿ ತುಸು ನೆಮ್ಮದಿ ಸಿಕ್ಕಂತಾಗಲಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com