10 ದಿನಗಳ ಕಾಲ ನಿಗದಿತ ವಿಮಾನಗಳಲ್ಲಿ ಮಧ್ಯದ ಸೀಟ್ ಫಿಲ್ ಮಾಡಲು ಏರ್ ಇಂಡಿಯಾಗೆ ಸುಪ್ರೀಂ ಅನುಮತಿ

ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಆರೋಗ್ಯಕ್ಕಿಂತ ಹೆಚ್ಚಾಗಿ ನಾಗರಿಕರ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಚಿಂತಿತರಾಗಬೇಕು ಎಂದಿರುವ ಸುಪ್ರೀಂ ಕೋರ್ಟ್,  ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮುಂದಿನ ಹತ್ತು ದಿನಗಳವರೆಗೆ ನಿಗದಿಯಾಗಿರುವ ವಿಮಾನಗಳಲ್ಲಿ ಮಧ್ಯದ ಸೀಟ್ ಅನ್ನು ಫಿಲ್ ಮಾಡಲು ಸೋಮವಾರ ಅನುಮತಿ ನೀಡಿದೆ.
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಆರೋಗ್ಯಕ್ಕಿಂತ ಹೆಚ್ಚಾಗಿ ನಾಗರಿಕರ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಚಿಂತಿತರಾಗಬೇಕು ಎಂದಿರುವ ಸುಪ್ರೀಂ ಕೋರ್ಟ್,  ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮುಂದಿನ ಹತ್ತು ದಿನಗಳವರೆಗೆ ನಿಗದಿಯಾಗಿರುವ ವಿಮಾನಗಳಲ್ಲಿ ಮಧ್ಯದ ಸೀಟ್ ಅನ್ನು ಫಿಲ್ ಮಾಡಲು ಸೋಮವಾರ ಅನುಮತಿ ನೀಡಿದೆ.

ಡಿಜಿಸಿಎ ಸುತ್ತೋಲೆಗಳ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಿ, ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್‌ಗೆ ಸೂಚಿಸಿದೆ. ಅಲ್ಲದೆ ಮಧ್ಯ ಸೀಟುಗಳನ್ನು ಖಾಲಿ ಇರಿಸುವ ಮೂಲಕ ವಿಮಾನದೊಳಗೆ, ಇಬ್ಬರು ಪ್ರಯಾಣಿಕರ ನಡುವೆ ಒಂದು ಸೀಟ್ ಖಾಲಿ ಬಿಡುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಮತ್ತು ಇತರ ವಿಮಾನಯಾನ ಸಂಸ್ಥೆಗಳು ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಮತ್ತು ಏರ್ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.

ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ಕರೆತರುವಾಗ ವಿಮಾನಯಾನ ಸಂಸ್ಥೆಗಳು ಕೊವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಏರ್ ಇಂಡಿಯಾ ಪೈಲಟ್ ವೊಬ್ಬರು ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏರ್ ಇಂಡಿಯಾ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನಿಂದ ಪ್ರತಿಕ್ರಿಯೆ ಕೋರಿತ್ತು. ಅಲ್ಲದೆ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com