ಆಹಾರಕ್ಕಾಗಿ ಮೊರೆಯಿಟ್ಟ ವಲಸೆ ಕಾರ್ಮಿಕನಿಗೆ ರೈಲಿನಿಂದ ಜಂಪ್ ಮಾಡಲು ಹೇಳಿದ ಐಎಎಸ್ ಅಧಿಕಾರಿ- ಆಡಿಯೋ ವೈರಲ್ 

ಸರಿಯಾಗಿ ಆಹಾರ ಪೂರೈಸುತ್ತಿಲ್ಲ. ಹಸಿವು ನೀಗಿಸಲು ಕ್ರಮ ಕೈಗೊಳ್ಳಿ ಎಂದು ಮೊರೆಯಿಟ್ಟ ವಲಸೆ ಕಾರ್ಮಿಕರೊಬ್ಬರಿಗೆ ಐಎಎಸ್ ಅಧಿಕಾರಿಯೊಬ್ಬರು ರೈಲಿನಿಂದ ಜಂಪ್ ಮಾಡಿ ಎಂದು ಖಾರವಾಗಿ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರಮಿಕ್ ವಿಶೇಷ ರೈಲು
ಶ್ರಮಿಕ್ ವಿಶೇಷ ರೈಲು

ರಾಂಚಿ: ಸರಿಯಾಗಿ ಆಹಾರ ಪೂರೈಸುತ್ತಿಲ್ಲ. ಹಸಿವು ನೀಗಿಸಲು ಕ್ರಮ ಕೈಗೊಳ್ಳಿ ಎಂದು ಮೊರೆಯಿಟ್ಟ ವಲಸೆ ಕಾರ್ಮಿಕರೊಬ್ಬರಿಗೆ ಐಎಎಸ್ ಅಧಿಕಾರಿಯೊಬ್ಬರು ರೈಲಿನಿಂದ ಜಂಪ್ ಮಾಡಿ ಎಂದು ಖಾರವಾಗಿ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾರ್ಖಂಡ್  ಐಎಎಸ್ ಅಧಿಕಾರಿ ಎಪಿ ಸಿಂಗ್ ಹಾಗೂ ವಲಸೆ ಕಾರ್ಮಿಕರೊಬ್ಬರ ನಡುವಿನ ಸಂಭಾಷಣೆ ಇರುವ ಆಡಿಯೋ ಇದಾಗಿದೆ.  ಸಿಂಗ್ ಅವರಿಗೆ ಕರೆ ಮಾಡಿರುವ ವಲಸೆ ಕಾರ್ಮಿಕ, ಶ್ರಮಿಕ್ ರೈಲಿನಿಂದ ವಿಶೇಷ ರೈಲಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದೇವೆ. ಆಹಾರ ಕೊಟ್ಟಿಲ್ಲ, ಹಸಿವಿನಿಂದ ಇರುವುದಾಗಿ ದೂರು ನೀಡಿದ್ದಾರೆ.

 ರೈಲ್ವೆಯಿಂದ ಆಹಾರ ಪೂರೈಸುವುದಾಗಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಯಾವಾಗ ಪೂರೈಸುತ್ತಾರೆ, ಬ್ರೇಡ್ ಪಾಕೆಟ್, ಒಂದು ಕುಡಿಯುವ ನೀರಿನ ಬಾಟಲಿ, ಒಂದು ಬಾಳೆ ಹಣ್ಣು ನೀಡಿದ್ದಾರೆ. ಇದರಿಂದ ವಲಸೆ ಕಾರ್ಮಿಕರು ಹೇಗೆ ಜೀವ ಉಳಿಸಿಕೊಳ್ಳುತ್ತಾರೆ ಎಂದು ಕಾರ್ಮಿಕ ಪ್ರಶ್ನಿಸಿದ್ದಾನೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಧಿಕಾರಿ ಸಿಂಗ್, ಅಲ್ಲಿಂದ ಜಂಪ್ ಮಾಡಿ, ಬೇರೆ ಏನ್ನಾದರೂ ಆಯ್ಕೆಗಳಿವೆಯಾ ಎಂದು ಹೇಳಿದ್ದಾರೆ. ಜಿಗಿಯುವುದು ಉತ್ತಮವೇ ಸರ್? ಎಂದು ಕಾರ್ಮಿಕ ಪ್ರಶ್ನಿಸಿದ್ದಾನೆ. ಏನು ನೀಡಬೇಕೋ ಅದನ್ನು ರೈಲ್ವೆ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಹೇಳಿ ಸಿಂಗ್ ಕರೆಯನ್ನು ಕಟ್ ಮಾಡಿದ್ದಾರೆ. 

ನಂತರ ಆಡಿಯೋ ಬಗ್ಗೆ ಮಾತನಾಡಿರುವ ಸಿಂಗ್, ವಲಸೆ ಕಾರ್ಮಿಕ ಕರೆ ಮಾಡಿದಾಗ ಕುಟುಂಬ ಮತ್ತು ಮಕ್ಕಳ ಜೊತೆಯಲ್ಲಿದ್ದೆ. ಮಕ್ಕಳಿಗೆ ಜಂಪ್ ಮಾಡಿ ಎಂದು ಹೇಳಿರಬಹುದು, ಆಹಾರ ಪೂರೈಸುವಂತೆ ರೈಲ್ವೆ ಅಧಿಕಾರಿಗಳ ಮನವೊಲಿಸಿರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com