ಅಕ್ರಮ ಹಣ ವರ್ಗಾವಣೆ ಕೇಸು: ವಾಧವಾನ್ಸ್ ಸೋದರರು ಜೈಲಿಗೆ

ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ಕೇಳಿಬಂದ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಎಚ್ ಎಲ್ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಸೋದರರನ್ನು ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ಕೇಳಿಬಂದ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಎಚ್ ಎಲ್ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಸೋದರರನ್ನು ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ಇಬ್ಬರೂ ಈ ತಿಂಗಳ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದರು. ಜಾರಿ ನಿರ್ದೇಶನಾಲಯದ ಬಂಧನದ ಅವಧಿ ಮುಗಿದ ಬಳಿಕ ವಾಧವಾನ್ಸ್ ಸೋದರರನ್ನು ವಿಶೇಷ ನ್ಯಾಯಾಲಯದ ಮುಂದೆ ನಿನ್ನೆ ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯ ಬಂಧನ ಅವಧಿಯನ್ನು ವಿಸ್ತರಿಸದಿದ್ದರಿಂದ ವಿಶೇಷ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿದೆ.

ಮಾಜಿ ಭೂಗತ ಪಾತಕಿ ಇಕ್ಬಾಲ್ ಮಿರ್ಚಿ ಜೊತೆಗೆ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಕೂಡ ಜಾರಿ ನಿರ್ದೇಶನಾಲಯ ವಾಧವಾನ್ಸ್ ಸೋದರರನ್ನು ತನಿಖೆ ನಡೆಸಲಾಗಿತ್ತು. ಯೆಸ್ ಬ್ಯಾಂಕಿನ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಬಾರಿ ತನಿಖೆಗೆ ಕರೆದಿದ್ದರೂ ಕೂಡ ಕೋವಿಡ್-19 ಪ್ರಯಾಣ ನಿರ್ಬಂಧದಿಂದಾಗಿ ವಿಚಾರಣೆಗೆ ವಾಧವಾನ್ಸ್ ಸೋದರರು ಹಾಜರಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com