ಪಶ್ಚಿಮ ಬಂಗಾಳ ಸಚಿವರಿಗೆ ಕೊರೋನಾ ಪಾಸಿಟಿವ್, ಇಂದು ದಾಖಲೆಯ 344 ಹೊಸ ಪ್ರಕರಣ ಪತ್ತೆ

ಪಶ್ಟಿಮ ಬಂಗಾಳದ ಸಚಿವರೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಮಮತಾ ಬ್ಯಾನರ್ಜಿ ಸಂಪುಟಕ್ಕೂ ಮಹಾಮಾರಿ ವಕ್ಕರಿಸಿದೆ. 
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಟಿಮ ಬಂಗಾಳದ ಸಚಿವರೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಮಮತಾ ಬ್ಯಾನರ್ಜಿ ಸಂಪುಟಕ್ಕೂ ಮಹಾಮಾರಿ ವಕ್ಕರಿಸಿದೆ. 

ಪಶ್ಚಿಮ ಬಂಗಾಳ ಸಚಿವ ಸುಜಿತ್ ಬೋಸ್ ಅವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಅವರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ ಎಂದು ದೀದಿ ಸರ್ಕಾರದ ಮೂಲಗಳು ತಿಳಿಸಿವೆ.

ಸಚಿವರ ಮನೆಗೆಲಸದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಬೋಸ್ ಹಾಗೂ ಅವರ ಕುಟುಂಬವನ್ನು ಕೊವಿಡ್-19 ಪರೀಕ್ಷೆಗ ಒಳಪಡಿಸಲಾಗಿತ್ತು. ನಿನ್ನೆ ರಾತ್ರಿ ವರದಿ ಬಂದಿದ್ದು, ಸಚಿವ ಬೋಸ್ ಹಾಗೂ ಅವರ ಕುಟುಂಬದ ಒಬ್ಬ ವ್ಯಕ್ತಿಗೆ ಪಾಸಿಟಿವ್ ಬಂದಿದೆ.

ಈ ಮಧ್ಯ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಒಂದೇ ದಿನ 344 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4536ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com