ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಬದಲು ಸನ್ಯಾಸ ಸ್ವೀಕಾರವೇ ಮೇಲು: ಮಾಯಾವತಿ

ಬಿಜೆಪಿ ಜೊತೆಗೆ ತಮ್ಮ ಪಕ್ಷ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ

Published: 02nd November 2020 02:09 PM  |   Last Updated: 02nd November 2020 02:15 PM   |  A+A-


mayawati

ಮಾಯಾವತಿ

Posted By : Shilpa D
Source : Online Desk

ಲಕ್ನೋ: ಬಿಜೆಪಿ ಜೊತೆಗೆ ತಮ್ಮ ಪಕ್ಷ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ‘

ಇತ್ತೀಚಿಗೆ ತಾವು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಮುಸಲ್ಮಾನರು ಪಕ್ಷದಿಂದ ದೂರ ಉಳಿಯುಬೇಕು ಎಂಬುದು ಆ ಪಕ್ಷಗಳ ಉದ್ದೇಶವಾಗಿದೆ’‌ ಎಂದು ಟೀಕಿಸಿದರು. 

ಬಿಜೆಪಿ ಮತ್ತು ಬಿಎಸ್‌ಪಿ ಸಿದ್ಧಾಂತ ಪರಸ್ಪರ ವಿರುದ್ಧವಾಗಿವೆ. ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಬಿಎಸ್‌ಪಿ ಮೈತ್ರಿ ಸಾಧ್ಯವಿಲ್ಲ. ಕೋಮುವಾದಿ ಪಕ್ಷದ ಜೊತೆಗೂಡಿ ಬಿಎಸ್‌ಪಿ ಸ್ಪರ್ಧೆ ನಡೆಸುವುದಿಲ್ಲ ಎಂದು ಅವರು ಹೇಳಿದರು.

ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಬದಲಾಗಿ ಸನ್ಯಾಸ (ನಿವೃತ್ತಿ) ಸ್ವೀಕರಿಸಲು ಬಯಸುತ್ತೇನೆ. ಕೋಮುವಾದಿ, ಜಾತೀಯವಾದಿ ಪಕ್ಷಗಳು ಮತ್ತು ಬಂಡವಾಳಶಾಹಿ ಪಡೆಗಳ ವಿರುದ್ಧ ಎಲ್ಲ ರೀತಿಯಲ್ಲಿ ಹೋರಾಡಲಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಮುಂದಿನ ಮೇಲ್ಮನೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸಮಾಜವಾದಿ ಪಕ್ಷ ಬೆಂಬಲಿಸುವ ಅಭ್ಯರ್ಥಿಯ ಸೋಲಾಗುವಂತೆ ಪಕ್ಷ ಎಲ್ಲ ಯತ್ನ ನಡೆಸಲಿದೆ ಎಂದು ಹೇಳಿದರು. 

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp