ಪಾಲ್ಘರ್ ಸಮೂಹ ಹತ್ಯೆ: ನಾಲ್ವರು ಆರೋಪಿಗಳಿಗೆ ಜಾಮೀನು

ಪಾಲ್ಘರ್ ಸಮೂಹ ಹತ್ಯೆ ಪ್ರಕರಣದಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಇಬ್ಬರು ಗಂಡು ಮಕ್ಕಳು ಸೇರಿದಂತೆ ನಾಲ್ವರಿಗೆ ಮಂಗಳವಾರ ಥಾಣೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. 
ಪಾಲ್ಘರ್ ಸಮೂಹ ಹತ್ಯೆ: ನಾಲ್ವರು ಆರೋಪಿಗಳಿಗೆ ಜಾಮೀನು

ಮುಂಬೈ: ಪಾಲ್ಘರ್ ಸಮೂಹ ಹತ್ಯೆ ಪ್ರಕರಣದಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಇಬ್ಬರು ಗಂಡು ಮಕ್ಕಳು ಸೇರಿದಂತೆ ನಾಲ್ವರಿಗೆ ಮಂಗಳವಾರ ಥಾಣೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. 

ನ್ಯಾಯಾಧೀಶ ಪಿ ಪಿ ಜಾಧವ್ ಅವರು ನಾಲ್ವರು ಆರೋಪಿಗಳನ್ನು ತಲಾ 15 ಸಾವಿರ ರೂ. ಶುಲ್ಕದ ಮೇಲೆ ಜಾಮೀನು ನೀಡಿದ್ದಾರೆ.

 ಪ್ರಕರಣದಲ್ಲಿ ಬಂಧಿತರಾದ ಸುಮಾರು 200 ಜನರಲ್ಲಿ ಲಕ್ಷ್ಮಣ್ ರಾಮಾಜಿ ಜಾಧವ್ (58), ನಿತಿನ್ ಲಕ್ಷ್ಮಣ್ ಜಾಧವ್ (26), ಮನೋಜ್ ಲಕ್ಷ್ಮಣ್ ಜಾಧವ್ (25) ಮತ್ತು ತುಕಾರಾಂ ರೂಪ್ ಜಿ  ಸಾಥ್ (40) ಸೇರಿದ್ದು ಇವರಿಗೆ ಮೊದಲು ಜಾಮೀನು ಸಿಗಲಿದೆ.

ಏಪ್ರಿಲ್ 16, 2020 ರಂದು ಗುಂಪೊಂದು ಚೆಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ(70) ಮತ್ತು ಸುಶೀಲ್ ಗಿರಿ ಮಹಾರಾಜ್  (35) ಮತ್ತು ಅವರ ಚಾಲಕನಾಗಿದ್ದ ನಿಲೇಶ್ ತೆಲ್ಗಡೆ (30) ಅವರನ್ನು ಮುಂಬೈನಿಂದ  140 ಕಿ.ಮೀ ಉತ್ತರದಲ್ಲಿರುವ ಪಾಲ್ಘರ್ ಜಿಲ್ಲೆಯ ಗಂಡಕಿಂಚಲೆ ಎಂಬಲ್ಲಿ ಹತ್ಯೆ ಮಾಡಿತ್ತು. 

ಈ ಇಬ್ಬರೂ ಸಾಧುಗಳು ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಬಾಗವಹಿಸಲು ಗುಜರಾತಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಕಳ್ಳರೆಂದು ಭವಿಸಿದ್ದ ಜನಸಮೂಹ ಅವರನ್ನು ಮನಬಂದಂತೆ ಥಳಿಸಿ ಹತ್ಯೆ ಮಾಡಿದೆ.  ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸ್ ಸಿಐಡಿ (ಅಪರಾಧ) ಚಾರ್ಜ್‌ಶೀಟ್ ದಾಖಲಿಸಿದೆ. -

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com