ಅರ್ನಾಬ್ ಗೋಸ್ವಾಮಿ ಬೆಂಬಲಿಸಿ ಪ್ರತಿಭಟನೆಗೆ ಯತ್ನ: ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬಂಧನ
2018ರ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ್ದ ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರಾ ಮತ್ತು ತಾಜಿಂದರ್ ಬಗ್ಗಾ ಅವರನ್ನು ದೆಹಲಿಯ ರಾಜ್‌ಘಾಟ್‌ನ ಸಮೀಪ ಪೋಲೀಸರು ಬಂಧಿಸಿದ್ದಾರೆ.
Published: 08th November 2020 12:56 PM | Last Updated: 08th November 2020 12:56 PM | A+A A-

ಕಪಿಲ್ ಮಿಶ್ರಾ
ನವದೆಹಲಿ: 2018ರ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ್ದ ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರಾ ಮತ್ತು ತಾಜಿಂದರ್ ಬಗ್ಗಾ ಅವರನ್ನು ದೆಹಲಿಯ ರಾಜ್‌ಘಾಟ್‌ನ ಸಮೀಪ ಪೋಲೀಸರು ಬಂಧಿಸಿದ್ದಾರೆ.
ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದ ಸಮೀಪ ಧರಣಿ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಬಿಜೆಪಿ ನಾಯಕರನ್ನು ರಾಜೇಂದರ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ದೆಹಲಿ ಸರ್ಕಾರದ ಮಾಜಿ ಸಚಿವ ಮಿಶ್ರಾ, ಮಹಾರಾಷ್ಟ್ರದಲ್ಲಿ ಪೊಲೀಸರು ಗೋಸ್ವಾಮಿಯವರನ್ನು ಬಂಧಿಸಿದ ಕ್ರ್ಮದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು ಎಂದು ಹೇಳಿದರು. "ಇದು ದೇಶದಲ್ಲಿಒಬ್ಬ ಪತ್ರಕರ್ತನನ್ನ ಮಾತ್ರ ಬಂಧಿಸಲಾಗಿಲ್ಲ ಸರ್ಕಾರವನ್ನು ಪ್ರಶ್ನಿಸಿದ ಕಾರಣ ಅವರ ಕುಟುಂಬ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಮಾಡಿದ ಗೋಸ್ವಾಮಿ ವಿರುದ್ಧದ ಈ ದೌರ್ಜನ್ಯಕ್ಕೆ ನಮ್ಮ ವಿರೋಧವಿದೆ”ಎಂದು ಅವರು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಿಶ್ರಾ ಮತ್ತು ಬಗ್ಗಾ ಸೇರಿದಂತೆ ನಾಲ್ವರನ್ನು ಕಾನೂನು ಉಲ್ಲಂಘನೆಗೆ ಯತ್ನಿಸಿದ್ದ ಕಾರಣ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಬಂಧಿತರು ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ್ದರೆಂದು ಅವರು ಹೇಳಿದರು
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇಲೆ ಗೋಸ್ವಾಮಿಯನ್ನು ಮುಂಬೈನ ಲೋವರ್ ಪ್ಯಾರೆಲ್ ನಲ್ಲಿರುವ ಅವರ ನಿವಾಸದಿಂದ ಬುಧವಾರ ಬಂಧಿಸಲಾಗಿದ್ದು, ಅವರನ್ನು ನೆರೆಯ ರಾಯ್ಗಡ್ ಜಿಲ್ಲೆಯ ಅಲಿಬಾಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅವರನ್ನು ಸ್ಥಳೀಯ ನ್ಯಾಯಾಲಯ ನವೆಂಬರ್ 18 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದೆ.