ಮಧ್ಯಪ್ರದೇಶ: ಉಪ ಚುನಾವಣೆಯಲ್ಲಿ ಕೇಸರಿ ಮುನ್ನಡೆ, ಬಿಜೆಪಿಗೆ ಸ್ಪಷ್ಟ ಬಹುಮತ ಬಹುತೇಕ ನಿಶ್ಚಿತ

ಮಧ್ಯಪ್ರದೇಶದ 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ  ಮುನ್ನಡೆ ಕಾಯ್ದುಕೊಂಡಿದ್ದು,  230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೂಪಾಲ್: ಮಧ್ಯಪ್ರದೇಶದ 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ  ಮುನ್ನಡೆ ಕಾಯ್ದುಕೊಂಡಿದ್ದು,  230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದೆ.

ನವೆಂಬರ್ 3ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಇಂದು ಮಧ್ಯಾಹ್ನದವರೆಗೂ  ಬಿಜೆಪಿ 19, ಕಾಂಗ್ರೆಸ್ 8 ಮತ್ತು ಬಿಎಸ್ ಪಿ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. 

ಮುಖ್ಯವಾಗಿ, ಮಾಲ್ವಾ-ನಿಮಾರ್ ಪ್ರದೇಶದ ಸ್ಥಾನಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುತ್ತಿದ್ದರೆ, ಕೇಂದ್ರ ಸಂಸದ ಮತ್ತು ಬುಂದೇಲ್‌ಖಂಡ್ ಪ್ರದೇಶದ ಎರಡು ಸ್ಥಾನಗಳಲ್ಲಿ ದೊಡ್ಡ ಅಂತರದೊಂದಿಗೆ ಮುಂದಿದೆ.

ಆದರೆ, ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಡಿತ್ಯ ಸಿಂಧಿಯಾ ಅವರ ಸ್ವಕ್ಷೇತ್ರ ಗ್ವಾಲಿಯಾರ್ - ಚಂಬಲ್ ಪ್ರದೇಶದಲ್ಲಿ 8-10 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಚುನಾವಣೆ ನಡೆದ  28 ಸ್ಥಾನಗಳ ಪೈಕಿಯಲ್ಲಿ 16 ಸ್ಥಾನಗಳನ್ನು ಗ್ವಾಲಿಯರ್ - ಚಂಬಲ್ ವಲಯದಲ್ಲಿಯೇ ಇವೆ. ಮೊರೆನಾ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಕಡಿಮೆ ಅಂತರೊಂದಿಗೆ ಮುನ್ನಡೆಯಲ್ಲಿದೆ.

ಬಿಜೆಪಿ ರಾಜ್ಯ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ವಿಜಯೋತ್ಸಾಹ ಆಚರಿಸುತ್ತಿದ್ದರೆ, ಈಗಿನ ಪರಿಸ್ಥಿತಿ ಬದಲಾಗಬಹುದೇನೊ ಅಂತಾ ಕಾಯುತ್ತಾ ಕುಳಿತಿದೆ.  ಬೆಳಗ್ಗೆಯಷ್ಟೇ ಕಾಂಗ್ರೆಸ್ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು, ಅವರೇ ಯಾವುದೇ ತೀರ್ಪು ನೀಡಿದ್ದರೂ ಸ್ವೀಕರಿಸುವುದಾಗಿ ಹೇಳಿದ್ದಾರೆ.

ಬಿಜೆಪಿಯ ಅಭಿವೃದ್ಧಿ ಮತ್ತು ಸಾರ್ವಜನಿಕರ ಕಲ್ಯಾಣ ರಾಜಕೀಯಕ್ಕೆ ಜನರು ಮತ ಚಲಾಯಿಸಿದ್ದಾರೆ ಎಂಬ ಪ್ರವೃತ್ತಿಗಳು ಸ್ಪಷ್ಟವಾಗಿ ಬಿಂಬಿಸುತ್ತವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಟ್ವೀಟ್ ಮಾಡಿದ್ದಾರೆ.

ಸಂಜೆಯವರೆಗೂ ಇದೇ ರೀತಿಯಲ್ಲಿ 19-20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಮುಂದುವರೆದರೆ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಸರಳ ಬಹುಮತ ಸಿಕ್ಕಂತಾಗಲಿದೆ. ಬಿಜೆಪಿ ಪ್ರಸ್ತುತ 107 ಸ್ಥಾನಗಳನ್ನು ಹೊಂದಿದ್ದು, ಸರಳ ಬಹುಮತಕ್ಕೆ ಇನ್ನೂ 9 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ ಸರಳ ಬಹುಮತ ಪಡೆಯಲು ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com