'ಬಿಜೆಪಿಯಿಂದ ಪಾಸ್ವಾನ್ ಪರಂಪರೆ ನಾಶ; ಸಿದ್ಧಾಂತಕ್ಕಾಗಿ ಹೋರಾಡುತ್ತಿರುವ ಒಬ್ಬನೇ ನಾಯಕ ರಾಹುಲ್'

ಬಿಜೆಪಿಯು ತನ್ನ ತಂತ್ರಗಾರಿಕೆ ಮೂಲಕ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನು ನಾಶ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ತಗ್ಗಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. 
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ಭೂಪಾಲ್: ಬಿಜೆಪಿಯು ತನ್ನ ತಂತ್ರಗಾರಿಕೆ ಮೂಲಕ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನು ನಾಶ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ತಗ್ಗಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. 

ಮಧ್ಯಪ್ರದೇಶ ಉಪಚುನಾವಣೆ ಮತ್ತು ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು  75 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಬಿಹಾರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್‌ಜೆಡಿಯನ್ನು ಅವರು  ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. 

ಸಿದ್ಧಾಂತಕ್ಕಾಗಿ ಹೋರಾಡುತ್ತಿರುವ ದೇಶದ ಒಬ್ಬನೇ ನಾಯಕ ರಾಹುಲ್ ಗಾಂಧಿ. ರಾಜಕೀಯವು ಸಿದ್ಧಾಂತಕ್ಕೆ ಸಂಬಂಧಿಸಿದ್ದು ಎಂಬುದನ್ನು ಎನ್‌ಡಿಎ ಮಿತ್ರಪಕ್ಷಗಳು ಅರ್ಥಮಾಡಿಕೊಳ್ಳಬೇಕು.

ಯಾವುದೇ ವ್ಯಕ್ತಿಯು ಮಹತ್ವಾಕಾಂಕ್ಷೆಯಿಂದಾಗಿ ಸಿದ್ಧಾಂತವನ್ನು ತ್ಯಜಿಸಿ ಹಾಗೂ ಸ್ವಾರ್ಥಕ್ಕಾಗಿ ರಾಜಿ ಮಾಡಿಕೊಂಡರೆ ಅಂತಹವನು ರಾಜಕೀಯದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ದಿಗ್ವಿಜಯ್ ಹೇಳಿದ್ದಾರೆ.

ನಿತೀಶ್ ಜೀ, ಬಿಹಾರವು ನಿಮಗೆ ಸಣ್ಣದು. ನೀವು ರಾಷ್ಟ್ರ ರಾಜಕಾರಣವನ್ನು ಸೇರಬೇಕು. ಕೇಂದ್ರದ ಒಡೆದು ಆಳುವ ನೀತಿಯನ್ನು ಮುಂದುವರಿಸಲು ಬಿಡಬಾರದು. ಎಲ್ಲ ಸಮಾಜವಾದಿಗಳು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇರಿಸುವಂತೆ ಮಾಡುವುದಕ್ಕಾಗಿ ಈ ಸಲಹೆಯನ್ನು ಪರಿಗಣಿಸಿ' ಎಂದೂ ಅವರು ಹೇಳಿದ್ದಾರೆ.

‘ಜಾತ್ಯತೀತ ಮತ್ತು ಸಮಾಜವಾದಿ ಆದರ್ಶಗಳನ್ನು ಎತ್ತಿ ಹಿಡಿಯುವುದು ನೀವು ಮಹಾತ್ಮಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಗೆ ಸಲ್ಲಿಸುವ ನಿಜವಾದ ಗೌರವ. ನೀವು ಅವರ ಪರಂಪರೆಯನ್ನು ಹೆಚ್ಚಿಸುವ ನಾಯಕರಾಗಿದ್ದೀರ. ನೀವು ಯಾವ ನೆಲೆಯಿಂದ ರಾಜಕೀಯ ಪ್ರವೇಶಿಸಿದ್ದೀರೋ, ಅಲ್ಲಿಗೆ ಹಿಂದಿರುಗಿ ‘ ಎಂದು ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com