'ಉದ್ಧವ್ ಠಾಕ್ರೆ, ನೀವು ಸೋತಿದ್ದೀರಿ, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ': ಅರ್ನಬ್ ಗೋಸ್ವಾಮಿ

ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಂತರ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಗೊಂಡ ರಿಪಬ್ಲಿಕ್ ಟಿವಿ ಸಂಪಾದಕ ತಮ್ಮ ಟಿವಿ ಚಾನೆಲ್ ನ ನ್ಯೂಸ್ ರೂಂನಿಂದ ಮಾತನಾಡಿದ್ದಾರೆ.

Published: 12th November 2020 08:32 AM  |   Last Updated: 12th November 2020 12:33 PM   |  A+A-


Arnab Goswami

ಅರ್ನಬ್ ಗೋಸ್ವಾಮಿ

Posted By : Sumana Upadhyaya
Source : PTI

ಮುಂಬೈ: ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಂತರ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಗೊಂಡ ರಿಪಬ್ಲಿಕ್ ಟಿವಿ ಸಂಪಾದಕ ತಮ್ಮ ಟಿವಿ ಚಾನೆಲ್ ನ ನ್ಯೂಸ್ ರೂಂನಿಂದ ಮಾತನಾಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಮಾತಲ್ಲಿಡೀ ಹರಿಹಾಯ್ದ ಅವರು, ತಮ್ಮನ್ನು ಸುಳ್ಳು ಕೇಸಿನಲ್ಲಿ ಬಂಧಿಸಿದರು ಎಂದು ಆರೋಪಿಸಿದರು.

ಉದ್ಧವ್ ಠಾಕ್ರೆ ಕೇಳಿಲ್ಲಿ, ನೀವು ಎಲ್ಲ ಕಳೆದುಕೊಂಡಿರಿ, ನೀವು ಸೋತುಹೋದಿರಿ. ಒಂದು ಹಳೆಯ ಸುಳ್ಳು ಕೇಸಿನಲ್ಲಿ ನನ್ನನ್ನು ಸಿಕ್ಕಿಹಾಕಿಸಿ ಬಂಧಿಸಿದಿರಿ. ಅದಕ್ಕಾಗಿ ನನ್ನ ಕ್ಷಮೆಯನ್ನು ಕೂಡ ಕೇಳಲಿಲ್ಲ ಎಂದರು. 

ಆಗ ನ್ಯೂಸ್ ರೂಂನಲ್ಲಿದ್ದ ಅವರ ಸಹೋದ್ಯೋಗಿಗಳು ಅವರಿಗೆ ಚಪ್ಪಾಳೆ ತಟ್ಟಿ ಬೆಂಬಲಿಸಿದರು. ನಾನು ಜೈಲಿನಲ್ಲಿದ್ದುಕೊಂಡೇ ಸುದ್ದಿ ವಾಹಿನಿಯನ್ನು ಆರಂಭಿಸುವೆನು, ಆದರೆ ನಿಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ಸಹ ಮುಖ್ಯಮಂತ್ರಿಗೆ ಟಾಂಗ್ ಕೊಟ್ಟರು. 
ಆಟ ಈಗಷ್ಟೇ ಆರಂಭವಾಗಿದೆ, ರಿಪಬ್ಲಿಕ್ ಟಿವಿ ಚಾನೆಲ್ ನ್ನು ಎಲ್ಲಾ ಸ್ಥಳೀಯ ಭಾಷೆಗಳಲ್ಲಿಯೂ ಆರಂಭಿಸಲಾಗುವುದು, ಅಂತಾರಾಷ್ಟ್ರೀಯ ಮಾಧ್ಯಮವನ್ನು ಸಹ ತೆರೆಯಲಾಗುವುದು ಎಂದು ಘೋಷಿಸಿದರು. 

ತಮಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಿದ ಅವರು, ಕೆಲವು ವಾಕ್ಯವನ್ನು ಮರಾಠಿ ಭಾಷೆಯಲ್ಲಿ ಮಾತನಾಡಿ ಜೈ ಮಹಾರಾಷ್ಟ್ರ ಎಂದು ಕೂಗಿ ಮಾತು ಮುಗಿಸಿದರು. 

ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ನ್ಯಾಯಕ್ಕೆ ಅವಿವೇಚನೆ ಮಾಡಿದಂತಾಗುತ್ತದೆ ಎಂದು ಹೇಳಿದ ಸುಪ್ರೀಂ ಕೋರ್ಟ್ ಅರ್ನಬ್ ಗೋಸ್ವಾಮಿಯವರಿಗೆ ಮಧ್ಯಂತರ ಜಾಮೀನು ನೀಡಿತು. 

ಕಳೆದ ರಾತ್ರಿ ಸುಮಾರು 8.30ರ ಸುಮಾರಿಗೆ ಮುಂಬೈಯ ತಲೊಜಾ ಜೈಲಿನಿಂದ ಬಿಡುಗಡೆಗೊಂಡ ನಂತರ ಅವರಿಗೆ ಅವರ ಅಭಿಮಾನಿಗಳು ಅಭೂತಪೂರ್ವವಾಗಿ ಸ್ವಾಗತಿಸಿದರು. ನಂತರ ಲೋವರ್ ಪರೇಲ್ ಸ್ಟುಡಿಯೊದಲ್ಲಿರುವ ತಮ್ಮ ರಿಪಬ್ಲಿಕ್ ಟಿವಿಯ ಕಚೇರಿಗೆ ಆಗಮಿಸಿದರು.ಅವರು ಮೊನ್ನೆ ನವೆಂಬರ್ 8ರಿಂದ ತಲೊಜ ಜೈಲಿನಲ್ಲಿದ್ದರು. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp