ಅರ್ನಬ್ ಜಾಮೀನು ವಿಚಾರವಾಗಿ 'ಸುಪ್ರೀಂ' ವಿರುದ್ಧ ಟ್ವೀಟ್; ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾಗೆ ಸಂಕಷ್ಟ!
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸಂಕಷ್ಟ ಎದುರಾಗಿದೆ.
Published: 13th November 2020 12:51 AM | Last Updated: 13th November 2020 12:52 AM | A+A A-

ಕುನಾಲ್ ಕಮ್ರಾ
ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸಂಕಷ್ಟ ಎದುರಾಗಿದೆ.
ಕುನಾಲ್ ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಒಪ್ಪಿಗೆ ನೀಡಿದ್ದಾರೆ.
ಕುನಾಲ್ ಕಮ್ರಾ ಸುಪ್ರೀಂ ಕೋರ್ಟ್ ನ್ಯಾಯಾಲಯದ ನ್ಯಾಮೂರ್ತಿಗಳನ್ನು ಉಲ್ಲೇಖಿಸಿ ನಾಲ್ಕು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮೂಲಕ ಕಮ್ರಾ ನ್ಯಾಯಾಂಗ ನಿಂದನೆ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರಿಬ್ಬರು ಪ್ರಕರಣ ದಾಖಲಿಸಲು ಅನುಮತಿ ಕೋರಿ ಅಟಾರ್ನಿ ಜನರಲ್ ಗೆ ಪತ್ರ ಬರೆದಿದ್ದರು.
DY Chandrachud is a flight attendant serving champagne to first class passengers after they’re fast tracked through, while commoners don’t know if they’ll ever be boarded or seated, let alone served.
— Kunal Kamra (@kunalkamra88) November 11, 2020
*Justice*
ಸುಪ್ರೀಂ ಕೋರ್ಟ್ ನಲ್ಲಿ ಅರ್ನಬ್ ರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ ಕುನಾಲ್ ಟ್ವೀಟ್ ಮಾಡಿದ್ದರು. ಅಲ್ಲದೆ ಆದೇಶದ ನಂತರವೂ ಟ್ವೀಟ್ ಮಾಡಿದ್ದು ಇದು ಜನರ ಮನಸ್ಸನ್ನು ಪೂರ್ವಾಗ್ರಹಪೀಡಿತಗೊಳಿಸುತ್ತವೆ ಎಂದು ವಕೀಲರಾದ ರಿಜ್ವಾನ್ ಸಿದ್ದಿಕಿ ದೂರಿನಲ್ಲಿ ತಿಳಿಸಿದ್ದರು.