ಪಟಾಕಿ ಹಚ್ಚುವಾಗ ಇರಲಿ ಎಚ್ಚರ: ನಿರ್ಲಕ್ಷ್ಯ, ನಿಯಮಗಳ ಪಾಲನೆಯಲ್ಲಿ ಬೇಡ ಅಸಡ್ಡೆ

ದೇಶಾದ್ಯಂತ ದೀಪಾವಳಿ ಆರಂಭವಾಗಿದೆ. ಪಟಾಕಿಗಳನ್ನು ಹಚ್ಚುವಾಗ ಆದಷ್ಟು ಎಚ್ಚರವಾಗಿರಿ ಎಂದು ಗಣ್ಯರು, ವೈದ್ಯರು ಈ ವರ್ಷವೂ ಎಚ್ಚರಿಕೆ ನೀಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇಶಾದ್ಯಂತ ದೀಪಾವಳಿ ಆರಂಭವಾಗಿದೆ. ಪಟಾಕಿಗಳನ್ನು ಹಚ್ಚುವಾಗ ಆದಷ್ಟು ಎಚ್ಚರವಾಗಿರಿ ಎಂದು ಗಣ್ಯರು, ವೈದ್ಯರು ಈ ವರ್ಷವೂ ಎಚ್ಚರಿಕೆ ನೀಡಿದ್ದಾರೆ. 

ಪ್ರತಿವರ್ಷ ಪಟಾಕಿ ಹಚ್ಚುವುದರಿಂದ ಆಗುವ ದುರ್ಘಟನೆಗಳು ಹೆಚ್ಚಾಗುತ್ತಾ ಹೋಗುತ್ತಿವೆ ಎಂದು ಚೆನ್ನೈಯ ರಾಜನ್ ಐ ಕೇರ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ ಮೋಹನ್ ರಾಜನ್ ಹೇಳುತ್ತಾರೆ.

ಪಟಾಕಿ ಹಚ್ಚುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳಲ್ಲಿ ನಿರ್ಲಕ್ಷ್ಯ ಮತ್ತು ವೈಫಲ್ಯವೇ ದುರ್ಘಟನೆ ಹೆಚ್ಚಾಗಲು ಕಾರಣ. ಕಣ್ಣಿಗೆ ಸಂಬಂಧಿಸಿದ ಅನಾಹುತಗಳು ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಹೆಚ್ಚಾಗುತ್ತಿರುತ್ತದೆ ಎಂದು ಅವರು ಹೇಳುತ್ತಾರೆ.

ಮಕ್ಕಳಲ್ಲಿ ಶೇಕಡಾ 45 ರಷ್ಟು ಗಾಯಗಳು ಮನೆಯಲ್ಲಿ ಸಂಭವಿಸುತ್ತಿರುವುದು ಕಂಡುಬಂದಿದೆ, ಅದರಲ್ಲಿ ಪಟಾಕಿ ಹಚ್ಚುವುದರಿಂದ ಗಾಯಗಳ ಕೊಡುಗೆ ಶೇಕಡಾ 10 ರಷ್ಟಿದೆ ”ಎಂದು ಡಾ ರಾಜನ್ ಹೇಳುತ್ತಾರೆ. ತಜ್ಞರು ಹೇಳುವಂತೆ ‘ರಾಕೆಟ್’ ಪಟಾಕಿ ಗಾಯಗಳು ಅತ್ಯಂತ ಕೆಟ್ಟದಾಗಿದೆ, ಏಕೆಂದರೆ ಅವು ಕಣ್ಣುಗುಡ್ಡೆಗಳನ್ನು ಛಿದ್ರಗೊಳಿಸುತ್ತವೆ. ಟದ ಗಾಯಗಳು ಬಾಹ್ಯ ಸುಡುವಿಕೆಗೆ ಕಾರಣವಾಗಬಹುದು, ಇದರಲ್ಲಿ ಕೆಲವು ಲೋಹೀಯ ಭಾಗಗಳು ಕಣ್ಣಿಗೆ ಪ್ರವೇಶಿಸಿ ಹಾನಿಗೊಳಗಾಗಬಹುದು ಎಂದು ಹೇಳುತ್ತಾರೆ.

ಸುರಕ್ಷಿತವಾಗಿ ದೀಪಾವಳಿ ಹೇಗೆ ಆಚರಿಸಬಹುದು?:

  • ಟೆರ್ರಿ ಹತ್ತಿ, ಸಿಂಥಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ.
  • ಪಟಾಕಿಗಳನ್ನು ಸುಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
  • ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಸುಲಭವಾಗಿ ಇರಿಸಿ
  • ಕೈಯಲ್ಲಿ, ದೇಹದ ಹತ್ತಿರ, ಮುಚ್ಚಿದ ಪೆಟ್ಟಿಗೆಗಳು ಅಥವಾ ಬಾಟಲಿಗಳ ಹತ್ತಿರ ಪಟಾಕಿಗಳನ್ನು ಸುಡಬೇಡಿ
  • ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿರುವ ತೆರೆದ ಸ್ಥಳಗಳಲ್ಲಿ ಮಾತ್ರ ಹಗುರವಾದ ‘ರಾಕೆಟ್’ ಪಟಾಕಿಗಳನ್ನು ಹಚ್ಚಿ.
  • ಜನದಟ್ಟಣೆಯ ಪ್ರದೇಶಗಳಲ್ಲಿ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೋಲ್ ಮಳಿಗೆಗಳು, ಅನಿಲ -ಕೇಂದ್ರಗಳು ಅಥವಾ ಧಾರ್ಮಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಬೇಡಿ
  • ಪೋಷಕರು ಮಕ್ಕಳನ್ನು ಮೇಲ್ವಿಚಾರಣೆ ಮಾಡಬೇಕು
  • ಪಟಾಕಿ ಸಿಡಿಸಿ ಪ್ರಾಣಿಗಳಿಗೆ ಬೆದರಿಕೆ ಅಥವಾ ನೋಯಿಸಬೇಡಿ
  • ಅಧಿಕ ಶಬ್ದಮಾಲಿನ್ಯ ಉಂಟುಮಾಡುವ ಪಟಾಕಿಗಳು ಹಚ್ಚುವುದು ಬೇಡ.
  • ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಪರೀಕ್ಷಿಸಬೇಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com