ಮನ್ ಮೋಹನ್ ಸಿಂಗ್ ಪ್ರಶಂಸಿಸಿ, ಪ್ರಧಾನಿ ಮೋದಿ ಬಗ್ಗೆ ಉಲ್ಲೇಖಿಸದ ಒಬಾಮಾ- ಶಶಿ ತರೂರ್ 

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್  ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.
ಒಬಾಮಾ, ಶಶಿ ತರೂರ್
ಒಬಾಮಾ, ಶಶಿ ತರೂರ್

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್  ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.

ಮಂಗಳವಾರ ಬಿಡುಗಡೆಯಾದ ಒಬಾಮಾ ಅವರ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್ ' ಪ್ರತಿಯನ್ನು ಮುಂಚಿತವಾಗಿ ಪಡೆದುಕೊಂಡಿದ್ದು, ಭಾರತಕ್ಕೆ ಸಂಬಂಧಿಸಿದಂತ ಪ್ರತಿಯೊಂದು ಪುಟವನ್ನು ಓದಿದ್ದು, 902ನೇ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂದಿದ್ದಾರೆ.

ಮನ್ ಮೋಹನ್ ಸಿಂಗ್ ಅವರನ್ನು ಚಿಂತನಶೀಲ, ಪ್ರಾಮಾಣಿಕ ಸಭ್ಯತೆಯ ವ್ಯಕ್ತಿ ಎಂದು ಪ್ರಶಂಸಿರುವ ಒಬಾಮಾ, ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾಗಿ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಹಿಂಸೆ, ದುರಾಶೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಭೇದ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com