ವೇಲ್ ಯಾತ್ರೆ: ಬಿಜೆಪಿಗೆ ಎಐಎಡಿಎಂಕೆ ಎಚ್ಚರಿಕೆ 

ತಮಿಳುನಾಡಿನಲ್ಲಿ ಬಿಜೆಪಿ ಕೈಗೊಂಡಿರುವ ವೆಟ್ರಿವೇಲ್ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಢ ಎಐಎಡಿಎಂಕೆ , ತಮಿಳುನಾಡಿನ ಜನರನ್ನು ಜಾತಿ, ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದೆ. 

Published: 16th November 2020 02:19 PM  |   Last Updated: 16th November 2020 03:30 PM   |  A+A-


Vel Yatra row: Won't allow bid to divide people on the basis of caste and creed, asserts AIADMK

ವೇಲ್ ಯಾತ್ರೆ: ಬಿಜೆಪಿಗೆ ಎಐಎಡಿಎಂಕೆ ಎಚ್ಚರಿಕೆ

Posted By : Srinivas Rao BV
Source : The New Indian Express

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಕೈಗೊಂಡಿರುವ ವೆಟ್ರಿವೇಲ್ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಢ ಎಐಎಡಿಎಂಕೆ ,  ತಮಿಳುನಾಡಿನ ಜನರನ್ನು ಜಾತಿ, ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದೆ. 

ನ.21 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೆನ್ನೈ ಗೆ ಭೇಟಿ ನೀಡುತ್ತಿರುವುದು ಹಾಗೂ ರಾಜ್ಯದಲ್ಲಿ ಬಿಜೆಪಿ ವೆಟ್ರಿವೇಲ್ ಯಾತ್ರೆ ಕೈಗೊಂಡಿರುವುದರ ಬಗ್ಗೆ ನಮಧು ಅಮ್ಮ ಮುಖವಾಣಿಯಲ್ಲಿ ಬರೆದಿರುವ ಎಐಎಡಿಎಂಕೆ, 

ಜನರನ್ನು ಜಾತಿ-ಮತಗಳ ಆಧಾರದಲ್ಲಿ ವಿಭಜಿಸುವ ಯಾತ್ರೆಗಳಿಗೆ ಎಐಎಡಿಎಂಕೆ ಅವಕಾಶ ನೀಡುವುದಿಲ್ಲ ಇದನ್ನು ಕುರುಪ್ಪರ್ ಕೊಟ್ಟಮ್ (ಕಂದ ಶಷ್ಠಿ ಕವಚಕ್ಕೆ ಅಳವಡಿಸುವ ಆಯುಧ) ವನ್ನು ಹಿಡಿದಿರುವವರು ಹಾಗೂ ಕೇಸರಿ ಧ್ವಜ ಹಿಡಿದಿರುವವರು ತಮಿಳುನಾಡಿನ ಜನರು ಪಾಲಿಸುತ್ತಿರುವ ಏಕತೆ  ಹಾಗೂ ಸೌಹಾರ್ದತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಎಐಎಡಿಎಂಕೆ ಹೇಳಿದೆ.

ವೇಲ್ ಯಾತ್ರೆಗೆ ತಡೆಯೊಡ್ಡುವ ಪ್ರಯತ್ನದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ವನತಿ ಶ್ರೀನಿವಾಸನ್ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ನಮಧು ಅಮ್ಮಾ, ಮಾನವಿಯತೆಗಾಗಿಯೇ ಧರ್ಮ ಇರುವುದೇ ಹೊರತು ಭಾವೋದ್ರೇಕಗಳನ್ನು ಹೊತ್ತಿಸುವುದಕ್ಕಾಗಿ ಅಲ್ಲ ಎಂದು ತಿರುಗೇಟು ನೀಡಿದ್ದು, ತಮಿಳುನಾಡು ಧಾರ್ಮಿಕ ನೆಲೆಗಟ್ಟಿನಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp