ಲಕ್ನೋ: ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಶಾಸಕ ಅಮಿತ್ ಯಾದವ್ ಮನೆ ಮಂದೆ ಗುಂಡಿನ ದಾಳಿಗೆ ವ್ಯಕ್ತಿ ಬಲಿ
ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಸಮಾಜವಾದಿ ಪಕ್ಷದ ಶಾಸಕ ಅಮಿತ್ ಯಾದವ್ ಅವರ ನಿವಾಸದ ಮುಂದೆ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆ.
Published: 21st November 2020 12:12 PM | Last Updated: 21st November 2020 12:17 PM | A+A A-

ಸಾಂದರ್ಭಿಕ ಚಿತ್ರ
ಲಕ್ನೋ: ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಸಮಾಜವಾದಿ ಪಕ್ಷದ ಶಾಸಕ ಅಮಿತ್ ಯಾದವ್ ಅವರ ನಿವಾಸದ ಮುಂದೆ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆ.
ರಾಕೇಶ್ ರಾವತ್ ಮೃತ ವ್ಯಕ್ತಿ, ಎಂಎಲ್ ಸಿ ಅಮಿತ್ ಯಾದವ್ ಸಂಬಂಧಿ ಪಂಕಜ್ ಯಾದವ್ ತನ್ನ ಸ್ನೇಹಿತರಿಗೆ ತನ್ನ ಗನ್ ತೋರಿಸುವ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡಿಗೆ ರಾಕೇಶ್ ರಾವತ್ ಬಲಿಯಾಗಿದ್ದಾರೆ ಎಂದು ಡಿಸಿಪಿ ಸೋಮೆನ್ ವರ್ಮಾ ತಿಳಿಸಿದ್ದಾರೆ.
ಕಳೆದ ರಾತ್ರಿ ಅಮಿತ್ ಯಾದವ್ ಸೋದರಳಿಯ ಪಂಕಜ್ ಯಾದವ್ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಪಂಕಜ್ ತನ್ನ 32 ಬೋರ್ ನಾಡ ಪಿಸ್ತೂಲ್ ಅನ್ನು ಸ್ನೇಹಿತರಿಗೆ ತೋರಿಸುತ್ತಿದ್ದ. ಆಕಸ್ಮಿಕವಾಗಿ ಸಿಡಿದ ಗುಂಡು ರಾವತ್ ಗೆ ಹೊಕ್ಕಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಿಸ್ತೂಲ್ ಪಂಕಜ್ ಯಾದವ್ ಗೆ ಸೇರಿದ್ದಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.