ಪಶ್ಚಿಮ ಬಂಗಾಳದಲ್ಲಿ ಓವೈಸಿಗೆ ತೀವ್ರ ಹಿನ್ನಡೆ: ಟಿಎಂಸಿ ಸೇರಿದ ಎಂಐಎಂ ನಾಯಕರು!

ಪಶ್ಚಿಮ ಬಂಗಾಳದಲ್ಲಿ ಎಐಎಂಐಎಂ ಪಕ್ಷಕ್ಕೆ ತೀವ್ರ ಆಘಾತ ಎದುರಾಗಿದ್ದು, ಪಕ್ಷದ ಪ್ರಮುಖ ನಾಯಕರು ಟಿಎಂಸಿ ಸೇರಿದ್ದಾರೆ. 
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಎಐಎಂಐಎಂ ಪಕ್ಷಕ್ಕೆ ತೀವ್ರ ಆಘಾತ ಎದುರಾಗಿದ್ದು, ಪಕ್ಷದ ಪ್ರಮುಖ ನಾಯಕರು ಟಿಎಂಸಿ ಸೇರಿದ್ದಾರೆ. 

ತೃಣಮೂಲ ಕಾಂಗ್ರೆಸ್ ನ ಅನ್ವರ್ ಪಾಶಾ ಟಿಎಂಸಿ ಗೆ ಸೇರಿದ್ದು, ಎಐಎಂಐಎಂ ಪಕ್ಷ ಮತಗಳನ್ನು ವಿಭಜಿಸಿ ಭಾರತೀಯ ಜನತಾ ಪಕ್ಷಕ್ಕೆ ಲಾಭ ಮಾಡಿಕೊಡುತ್ತಿದೆ ಎಂದು ಪಾಶಾ ಆರೋಪಿಸಿದ್ದಾರೆ. 

ಸಮಾಜದ ಒಂದು ವರ್ಗದ ಜನರು ಧರ್ಮ-ಮತಗಳನ್ನು ಬಳಸಿ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದಾರೆ, ಈಗ ರಾಜ್ಯದತ್ತ ಕಣ್ಣು ನೆಟ್ಟಿರುವವರು ಕೇಸರಿ ಅಥವಾ ಹಸಿರನ್ನು ಹೊದ್ದಿರುವವರು ಯಾರೇ ಆಗಲಿ, ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಆಸ್ಪದವಿಲ್ಲ ಎಂಬುದನ್ನು ಅರಿಯಬೇಕೆಂದು ಅನ್ವರ್ ಪಾಶಾ ಹೇಳಿದ್ದಾರೆ.

ಬಿಹಾರದಲ್ಲಿಯೂ ಎಐಎಂಐಎಂ ಮತವಿಭಜನೆ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಯಿತು. ಆದರೆ ಅದು ಪಶ್ಚಿಮ ಬಂಗಾಳದಲ್ಲಿ ಸಾಧ್ಯವಾಗುವುದಿಲ್ಲ ಎಂದು ಪಾಶಾ ಎಚ್ಚರಿಸಿದ್ದು, ಬಂಗಾಳದ ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಬೇಕು, ಓವೈಸಿ ಬಂಗಾಳಕ್ಕೆ ಬರಬಾರದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com