ಹೈದರಾಬಾದ್: ಅಸಾದುದ್ದೀನ್ ಓವೈಸಿಗೆ ಪೋರ್ಕ್ ಬಿರಿಯಾನಿ ತಿನ್ನಲು ಬಿಜೆಪಿ ನಾಯಕ ರಾಜಾ ಸಿಂಗ್ ಆಹ್ವಾನ! 

ಜಿಹೆಚ್ಎಂಸಿ ಚುನಾವಣೆಯಲ್ಲಿ ಬಿಜೆಪಿ-ಎಐಎಂಐಎಂ ನಡುವೆ ಖಾದ್ಯಗಳಿಗೆ ಸಂಬಂಧಿಸಿದ ತಗಾದೆ-ವಾಗ್ವಾದಗಳು ಪ್ರಾರಂಭವಾಗಿದೆ.

Published: 25th November 2020 01:54 AM  |   Last Updated: 25th November 2020 12:24 PM   |  A+A-


GHMC polls: Raja Singh offers Asaduddin Owaisi pork biryani as BJP, AIMIM spar over dish

ಹೈದಾರಾಬಾದ್: ಅಸಾದುದ್ದೀನ್ ಓವೈಸಿಗೆ ಪೋರ್ಕ್ ಬಿರಿಯಾನಿ ತಿನ್ನಲು ಆಹ್ವಾನಿಸಿದ ಬಿಜೆಪಿ ನಾಯಕ ರಾಜಾ ಸಿಂಗ್!

Posted By : Srinivas Rao BV
Source : The New Indian Express

ಹೈದರಾಬಾದ್: ಜಿಹೆಚ್ಎಂಸಿ ಚುನಾವಣೆಯಲ್ಲಿ ಬಿಜೆಪಿ-ಎಐಎಂಐಎಂ ನಡುವೆ ಖಾದ್ಯಗಳಿಗೆ ಸಂಬಂಧಿಸಿದ ತಗಾದೆ-ವಾಗ್ವಾದಗಳು ಪ್ರಾರಂಭವಾಗಿದೆ.

ಬಿಜೆಪಿ ನಾಯಕರು ಬೀಫ್ ಬಿರಿಯಾನಿ ಸೇವನೆ ಮಾಡಬೇಕೆಂದು ಹೇಳಿದ್ದ ಓವೈಸಿಗೆ ತಿರುಗೇಟು ನೀಡಿರುವ ಗೋಶಮಹಲ್ ನ ಶಾಸಕ ರಾಜ ಸಿಂಗ್, ಓವೈಸಿಗೆ ಪೋರ್ಕ್ (ಹಂದಿ ಮಾಂಸ) ಬಿರಿಯಾನಿ ತಿನ್ನುವುದಕ್ಕೆ ಆಹ್ವಾನಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದಿಂದ ಅತ್ಯುತ್ತಮವಾದ ಪೋರ್ಕ್ ಬಿರಿಯಾನಿ ತಯಾರಾಗಲಿದೆ. ಬಿರಿಯಾನಿ ತಿನ್ನುವ ಆಸೆ ಇದ್ದರೆ, ನಾನು ಕೊಡಿಸುತ್ತೇನೆ ಎಂದು ಓವೈಸಿಗೆ ರಾಜ ಸಿಂಗ್ ಆಹ್ವಾನಿಸಿದ್ದಾರೆ. ಓವೈಸಿಗೆ ಚುನಾವಣೆ ಸೋಲುವ ಹತಾಶೆ ಕಾಡುತ್ತಿದ್ದು, ಬೀಫ್ ಬಿರಿಯಾನಿ ಹೇಳಿಕೆ ಇದಕ್ಕೆ ಸೂಚನೆಯಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಓವೈಸಿ, ಬಿಜೆಪಿ ನಾಯಕರು ಹತಾಶೆಗೊಳಗಾಗಿದ್ದಾರೆ, ಅವರಿಗೆ ಏನೂ ಅರ್ಥವಾಗುತ್ತಿಲ್ಲ. ಅವರು ಬಿರಿಯಾನಿ ತಿನ್ನಲಿ ಎಂದು ಓವೈಸಿ ಹೇಳಿಕೆ ನೀಡಿದ್ದರು.
 

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp