ಶಿರಡಿ ಮಂದಿರಕ್ಕೆ 10 ದಿನಗಳಲ್ಲಿ 1 ಲಕ್ಷ ಭಕ್ತಾದಿಗಳು, ಹರಿದುಬಂದ ದೇಣಿಗೆ ಮೊತ್ತವೆಷ್ಟು ಗೊತ್ತೇ? 

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ದೇವಾಲಯಗಳನ್ನು ತೆರೆಯುವುದಕ್ಕೆ ಆದೇಶ ನೀಡಿದ ನಂತರ, ಪ್ರಸಿದ್ಧ ದೇಗುಲ ಶಿರಡಿಗೆ ಈ ವರೆಗೂ (ನ.25) 1 ಲಕ್ಷ ಭಕ್ತಾದಿಗಳು ಆಗಮಿಸಿದ್ದು, ಬರೊಬ್ಬರಿ 3.09 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. 
ಶಿರಡಿ ಸಾಯಿಬಾಬಾ
ಶಿರಡಿ ಸಾಯಿಬಾಬಾ

ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ದೇವಾಲಯಗಳನ್ನು ತೆರೆಯುವುದಕ್ಕೆ ಆದೇಶ ನೀಡಿದ ನಂತರ, ಪ್ರಸಿದ್ಧ ದೇಗುಲ ಶಿರಡಿಗೆ ಈ ವರೆಗೂ (ನ.25) 1 ಲಕ್ಷ ಭಕ್ತಾದಿಗಳು ಆಗಮಿಸಿದ್ದು, ಬರೊಬ್ಬರಿ 3.09 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. 

3.09 ಕೋಟಿ ರೂಪಾಯಿ ಕಾಣಿಕೆಯ ಜೊತೆಗೆ 2,85,629 ರೂಪಾಯಿ ಬೆಲೆಬಾಳುವ 64 ಗ್ರಾಮ್ ಚಿನ್ನ, 93,000 ರೂಪಾಯಿ ಬೆಲೆ ಬಾಳುವ 2.8 ಕೆ.ಜಿ ಬೆಳ್ಳಿಯನ್ನು ಶಿರಡಿ ಸಾಯಿಬಾಬಾ ದೇವಾಲಯಕ್ಕೆ ನೀಡಲಾಗಿದೆ. 

ದೇವಾಲಯಗಳು ತೆರೆಯುವುದಕ್ಕೆ ನ.15 ರಂದು ಅನುಮತಿ ನೀಡಿದ್ದ ಸಿಎಂ ಠಾಕ್ರೆ, ಕೊರೋನಾ ರಾಕ್ಷಸ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಬಾರದು ಎಂದು ಜನತೆಗೆ ಕಿವಿಮಾತು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com