'ಚುನಾವಣೆ ಮುಗಿದಿದೆ': ವಾರಗಳ ವಿಳಂಬದ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭದ ಸುಳಿವು ನೀಡಿದ ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೋತ್ತರ ಪ್ರಹಸನಗಳಿಗೆ ತೆರೆ ಬೀಳುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದ್ದು, ವಾರಗಳ ವಿಳಂಬದ ನಂತರ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ. 

Published: 25th November 2020 12:40 AM  |   Last Updated: 25th November 2020 12:43 AM   |  A+A-


US Elections-2020: After weeks of delay, formal transition of power to biden begins

ಚುನಾವಣೆ ಮುಗಿದಿದೆ: ವಾರಗಳ ವಿಳಂಬದ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭದ ಸುಳಿವು ನೀಡಿದ ಜೋ ಬೈಡನ್

Posted By : Srinivas Rao BV
Source : Reuters

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೋತ್ತರ ಪ್ರಹಸನಗಳಿಗೆ ತೆರೆ ಬೀಳುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದ್ದು, ವಾರಗಳ ವಿಳಂಬದ ನಂತರ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ. 

ಜೋ ಬೈಡನ್ ಅವರ ಅಧಿಕಾರ ಹಸ್ತಾಂತರ ತಂಡ, ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸಲು ಫೆಡರಲ್ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಿದೆ. ಸೋಮವಾರದಂದು ಪ್ರಕಟಗೊಂಡ ಘೋಷಣೆಯ ಬಳಿಕ ಜೋ ಬೈಡನ್ ತಮ್ಮ ತಂಡದ ಆಯ್ಕೆ ಹಾಗೂ ಸಂಪುಟ ಸಹೋದ್ಯೋಗಿಗಳ ಆಯ್ಕೆಯನ್ನು ತ್ವರಿತಗೊಳಿಸಿದ್ದಾರೆ.

ತಮ್ಮ ಅಧಿಕಾರವನ್ನು ಮತ್ತಷ್ಟು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಜೋ ಬೈಡನ್, " ಚುನಾವಣೆ ಮುಕ್ತಾಯಗೊಂಡಿದೆ, ಒಬ್ಬರೊನ್ನೊಬ್ಬರು ಕೆಟ್ಟದಾಗಿ ಬಿಂಬಿಸುವುದನ್ನು ಬದಿಗಿರಿಸಬೇಕಾದ ಸಮಯ ಇದು ಎಂದು ಹೇಳಿದ್ದಾರೆ.

ಈ ವರೆಗೂ ಕಾನೂನಾತ್ಮಕ ಹೋರಾಟದ ವಿಚಾರವಾಗಿ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್ ಆಡಳಿತದ ತಂಡ ಈಗ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ರಾಯ್ಟರ್ಸ್ ವರದಿ ಮೂಲಕ ತಿಳಿದುಬಂದಿದೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp