ಹುಟ್ಟೂರಿನಲ್ಲಿ ಅಹ್ಮದ್ ಪಟೇಲ್ ಅಂತ್ಯಸಂಸ್ಕಾರ: ರಾಹುಲ್ ಭಾಗಿ
ನಿನ್ನೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜಕೀಯ ತಂತ್ರಗಾರ, ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರು ಗುಜರಾತಿನ ಬುರೂಜ್ ಜಿಲ್ಲೆಯ ಪಿರಮನ್ ಗ್ರಾಮದಲ್ಲಿ ನೆರವೇರಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Published: 26th November 2020 01:48 PM | Last Updated: 26th November 2020 01:48 PM | A+A A-

ಅಹ್ಮದ್ ಪಟೇಲ್ ಅಂತಿಮ ಸಂಸ್ಕಾರ
ಬರೂಚ್: ನಿನ್ನೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜಕೀಯ ತಂತ್ರಗಾರ, ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರು ಗುಜರಾತಿನ ಬುರೂಜ್ ಜಿಲ್ಲೆಯ ಪಿರಮನ್ ಗ್ರಾಮದಲ್ಲಿ ನೆರವೇರಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಡೋದರಾದಿಂದ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರವನ್ನು ಪಿರಮನ್ ಗ್ರಾಮಕ್ಕೆ ತರಲಾಯಿತು. ನೂರಾರು ಕಾಂಗ್ರೆಸ್ ಮಖಂಡರು, ಸ್ಥಳೀಯ ಸಮ್ಮುಖದಲ್ಲಿ ಮುಸ್ಲಿಂ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಬುಧವಾರ ರಾತ್ರಿ ವಡೋದರಾ ವಿಮಾನ ನಿಲ್ದಾಣ ತಲುಪಿದ ಪಾರ್ಥಿವ ಶರೀರವನ್ನು ಅಂಕಲೇಶ್ವರದ ಸರ್ದಾರ್ ಪಟೇಲ್ ಆಸ್ಪತ್ರೆಯಲ್ಲಿ ಇಡಲಾಗಿತ್ತು.
ಇಂದು ಬೆಳಿಗ್ಗೆ ಸೂರತ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ರಸ್ತೆ ಮೂಲಕ ಪಿರಮಾನ್ ತಲುಪಿದ ರಾಹುಲ್ ಗಾಂಧಿ, ಮಾಜಿ ಸಂಸದರ ದುಃಖಿತ ಕುಟುಂಬವನ್ನು ಸಮಾಧಾನಪಡಿಸಿದರು. ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರವನ್ನು ಅವರ ಹೆತ್ತವರ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ