ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಎಂಬ ಹೆಸರು ಹಾಗೇ ಇರುತ್ತದೆ: ಆದಿತ್ಯನಾಥ್ ಗೆ ಓವೈಸಿ ತಿರುಗೇಟು

 ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದಾದರೆ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ "ಉತ್ತರ ಪ್ರದೇಶ ಮುಖ್ಯಂತ್ರಿಗಳಾದ ನಿಮ್ಮ ಪೀಳಿಗೆಯು ಕೊನೆಗೊಳ್ಳಬಹುದು ಆದರೆ ನಗರವನ್ನು ಹೈದರಾಬಾದ್ ಎಂದೇ ಕರೆಯಲಾಗುತ್ತದೆ" ಎಂ
ಅಸದುದ್ದೀನ್ ಓವೈಸಿ
ಅಸದುದ್ದೀನ್ ಓವೈಸಿ

ಹೈದರಾಬಾದ್: ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದಾದರೆ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ "ಉತ್ತರ ಪ್ರದೇಶ ಮುಖ್ಯಂತ್ರಿಗಳಾದ ನಿಮ್ಮ ಪೀಳಿಗೆಯು ಕೊನೆಗೊಳ್ಳಬಹುದು ಆದರೆ ನಗರವನ್ನು ಹೈದರಾಬಾದ್ ಎಂದೇ ಕರೆಯಲಾಗುತ್ತದೆ" ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಹೈದರಾಬಾದ್‌ನ ಮಲ್ಕಜಗಿರಿ ಪ್ರದೇಶದಲ್ಲಿ ನಡೆದ ಮೆಗಾ ರೋಡ್ ಶೋ ಸಂದರ್ಭದಲ್ಲಿ ಆದಿತ್ಯನಾಥ್ ಅವರು ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನಗರಕ್ಕೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಹೇಳಿದ್ದರು.

"... ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದ್ದೇವೆ. ಹಾಗಾದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಏಕೆ ಮರುನಾಮಕರಣ ಮಾಡಲಾಗುವುದಿಲ್ಲ?" ಆದಿತ್ಯನಾಥ್ ಹೇಳಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಓವೈಸಿ : "... ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಹೆಸರು ಮಾತ್ರ ಹಾಗೆಯೇ ಉಳಿಯುತ್ತದೆ, ಚುನಾವಣೆಗಳು ಹೈದರಾಬಾದ್ ಮತ್ತು ಭಾಗ್ಯನಗರ ನಡುವೆ ನಡೆಯುತ್ತವೆ, ಮತ್ತು ಹೈದರಾಬಾದ್ ಅನ್ನು ಮರುನಾಮಕರಣ ಮಾಡದಿರಲು ನೀವು ಬಯಸಿದರೆ ಮಜಿಗಳಿಗೆ ಮತ ನೀಡಿ" ಎಂದಿದ್ದಾರೆ.

ಜಿಐಎಂಸಿ ಚುನಾವಣೆಗೆ ಮುನ್ನ ತಮ್ಮ ಪಕ್ಷದ ಪರ ಪ್ರಚಾರ ನಡೆಸುತ್ತಿರುವಾಗ ಎಐಎಂಐಎಂ ಮುಖ್ಯಸ್ಥರು ಶನಿವಾರ ಸಂಜೆ ಈ ಹೇಳಿಕೆ ನಿಡಿದ್ದಾರೆ.

150 ಸದಸ್ಯರ ಜಿಎಚ್‌ಎಂಸಿಗೆ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com